ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕೇಳಿದ್ದು 50 ಲಕ್ಷ . ಸಿಕ್ಕಿದ್ದು ಒಂದೂವರೆ ಕೋಟಿ. ಶಾಸಕ ಅಶೋಕ್ ರೈಗಳ ಬಡವರ ಮೇಲಿನ ಕಾಳಜಿಗೆ ಸೈ ಎಂದ ಸಿಎಂಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರಕಟಣೆ ಪ್ರತಿಭಾ ಪುರಸ್ಕಾರ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಿಶೇಷ ವರದಿ ಶುಭಾರಂಭ ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಬೆಳ್ತಂಗಡಿ : ಮೇ 11 : ಮುಳಿಯ ಜ್ಯುವೆಲ್ಸ್ ನಲ್ಲಿ ಮುಳಿಯ ಚಿನ್ನೋತ್ಸವದ ಪ್ರಯುಕ್ತ ಚಿತ್ತಾರ - ಚಿಣ್ಣರ ಚಿತ್ರೋತ್ಸವ' ಚಿತ್ರಕಲೆ ಸ್ಪರ್ಧೆಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಜೀವನಶೈಲಿ ಧಾರ್ಮಿಕ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸ್ಥಳೀಯ
ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ-ತುಲಾಭಾರ ಸೇವೆ,ಶಾಸಕ ಅಶೋಕ್ ಕುಮಾರ್ ರೈ ಸಹಿತ ಹಲವರು ಭಾಗಿಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಧಾರ್ಮಿಕ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ
ಶ್ರೀ ಕ್ಷೇತ್ರ ಕಾಣಿಯೂರು ಕಾಣಿಯೂರು ಗ್ರಾಮ, ಕಡಬ,ನಾಗಶಿಲಾ ಪ್ರತಿಷ್ಠೆ, ರಕೇಶ್ವರಿ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ ಆಮಂತ್ರಣಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ವಿಶೇಷ ವರದಿ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಗ್ರಾಮ ಸುಭಿಕ್ಷ ಕಾರ್ಯಕ್ರಮದ ಅಂಗವಾಗಿ ನೆಟ್ಲಾ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ "ಸೀಯಾಳ ಅಭಿಷೇಕ"ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಧಾರ್ಮಿಕ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸ್ಥಳೀಯ
ಇಂದು ಚೆನ್ನಾವರ ಉಳ್ಳಾಕುಲು ದೈವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ, ವರ್ಷಾವಧಿ ನೇಮೋತ್ಸವ ಕಾಪು ರಂಗ ತರಂಗ ಕಲಾವಿದರ ಅಭಿನಯದ 'ಒರಿಯೆ' ನಾಟಕ ಪ್ರದರ್ಶನಅಭಿಪ್ರಾಯ ಇಂದಿನ ಕಾರ್ಯಕ್ರಮ ಇತರ ಇತ್ತೀಚಿನ ಸುದ್ದಿಗಳು ಕರ್ನಾಟಕ ಕಾನೂನು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ತಾಜಾ ಸುದ್ದಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಚುನಾವಣಾ ಸಂದರ್ಭದಲ್ಲಿ ನಿರಂತರವಾಗಿ ಗ್ಯಾರಂಟಿ ಯೋಜನೆ ಯಲ್ಲಿ ಮನೆಯ ಹೆಣ್ಣುಮಕ್ಕಳು ದಾರಿ ತಪ್ಪುವ ಆರೋಪ ಕುಮಾರಸ್ವಾಮಿ ಆರೋಪಕ್ಕೆ ಲೇವಡಿ ಮಾಡಿದ : ರಕ್ಷಿತ್ ಶಿವರಾಂಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಧಾರ್ಮಿಕ ಪ್ರಕಟಣೆ ಪ್ರತಿಭಾ ಪುರಸ್ಕಾರ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಇಂದು (ಏ29) ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಜಾತ್ರೋತ್ಸವ ಹಾಗೂ ಧರ್ಮದೈವಗಳ ನೇಮೋತ್ಸವಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಚುನಾವಣೆ ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ವಿಶೇಷ ವರದಿ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಮೋದಿಯನ್ನು ಪ್ರಧಾನಿ ಮಾಡುವುದೇ ವಧುವರರಿಗೆ ನೀಡುವ ಉಡುಗೊರೆ|ಮದುವೆ ಕಾರ್ಡ್ ವೈರಲ್, ಮದುಮಗನ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುPublished
5 hours agoon
By
Akkare Newsಪುತ್ತೂರು:ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್‌ನವರ ವಿತರಕ ಸಂಸ್ಥೆ ‘ಕುದ್ಕೋಳಿ ಫ್ಯೂಯೆಲ್ಸ್’ ಮೇ.19ರಂದು ಪುತ್ತೂರು-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೋಡಿಂಬಾಡಿಯಲ್ಲಿ ಶುಭಾರಂಭಗೊಂಡಿತು.
.
ಪೆಟ್ರೋಲ್ ವಿಭಾಗವನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸೇಡಿಯಾಪುನಲ್ಲಿ ಮೆಡಿಕಲ್ ಕಾಲೇಜು, ಬೆಳ್ಳಿಪ್ಪಾಡಿಯಲ್ಲಿ ಕೆಎಂಎಫ್ ಘಟಕ ನಿರ್ಮಾಣವಾಗುವ ಜೊತೆಯಲ್ಲಿ ಕೋಡಿಂಬಾಡಿಯಲ್ಲಿ ಪೆಟ್ರೋಲ್ ಪಂಪ್ ಪ್ರಾರಂಭಗೊಂಡಿದ್ದು ಗ್ರಾಮದ ಅಭಿವೃದ್ಧಿಗೆ ಪೂರಕವಾಗಿದೆ. ಕುದ್ಕೋಳಿ ಕುಟುಂಬಸ್ಥರು ಕೋಡಿಂಬಾಡಿ ಗ್ರಾಮಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಹೊಸ ಹೊಸ ಉದ್ಯಮಗಳು ಬರಬೇಕು, ಯುವ ಜನತೆಗೆ ಉದ್ಯೋಗಗಳು ದೊರೆಯಬೇಕು ಎಂದರು. ಪೆಟ್ರೋಲ್ ಪಂಪ್‌ಗಳಲ್ಲಿ ಗುಣಮಟ್ಟ ಹಾಗೂ ಅಳತೆಯಲ್ಲಿ ಯಾವುದೇ ಪಂಪ್‌ಗಳಲ್ಲಿ ವ್ಯತ್ಯಾಸ ಇಲ್ಲ. ಆದರೆ ಗ್ರಾಹಕರಿಗೆ ನೀಡುವ ಸೇವೆ ಉತ್ತಮವಾಗಿದ್ದರೆ ಗ್ರಾಹಕರು ಇಷ್ಟುಪಟ್ಟು ಬರುತ್ತಾರೆ. ಜನರಲ್ಲಿ ಬಹಳಷ್ಟು ನಿರೀಕ್ಷೆಗಳಿದ್ದು ಗ್ರಾಹಕರಿಗೆ ಉತ್ತಮ ಸೇವೆ ದೊರೆತು ಉದ್ಯಮ ಯಶಸ್ವಿಯಾಗಿ ಬೆಳೆಯಲಿ ಎಂದರು.
ಡೀಸೆಲ್ ವಿಭಾಗವನ್ನು ಉದ್ಘಾಟಿಸಿದ ಸಂಜೀವ ಮಠಂದೂರು ಮಾತನಾಡಿ, ಪುತ್ತೂರು ಅಭಿವೃದ್ಧಿ ಆಗುವ ಜೊತೆಗೆ ಕುದ್ಕೋಳಿ ಫ್ಯೂಯಲ್ಸ್ ಕೋಡಿಂಬಾಡಿ ಗ್ರಾಮದ ಜನರ ಅವಶ್ಯಕತೆ ಪೂರೈಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ರೋಲ್ ಪಂಪ್ ಪ್ರಾರಂಭವಾಗುವ ಮೂಲಕ ಇಂದನ ಪೂರೈಕೆ ಮನೆ ಬಾಗಿಲಿಗೆ ಬರುತ್ತಿದೆ. ರಾಜ್ಯ ಹೆದ್ದಾರಿಯಲ್ಲಿ ಉತ್ತಮ ಸೌಲಭ್ಯಗಳೊಂದಿಗೆ ಪ್ರಾರಂಭಗೊಂಡಿದ್ದು ಈ ಭಾಗದ ಎಲ್ಲರ ಸಹಕಾರ ದೊರೆಯಲಿ. ಕುಟುಂಬದ ಆರ್ಥಿಕ ಅಭಿವೃದ್ಧಿ ಜೊತೆಗೆ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ಪೆಟ್ರೋಲ್ ಪಂಪ್ ಪ್ರಾರಂಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಕಚೇರಿ ಉದ್ಘಾಸಿದ ಮಂಗಳೂರು ಹಿಂದೂಸ್ಥಾನ ಪೆಟ್ರೋಲಿಯಂನ ಡಿಜಿಎಂ ನವೀನ್ ಕುಮಾರ್ ಮಾತನಾಡಿ, ಕೋಡಿಂಬಾಡಿಯಲ್ಲಿ ಪೆಟ್ರೋಲ್ ಪಂಪ್ ಪ್ರಾರಂಭಿಸುವಲ್ಲಿ ಕುದ್ಕೋಳಿ ಕುಟುಂಬದ ಎಲ್ಲರ ಶ್ರಮವಿದೆ. ಸಂಸ್ಥೆಯಿಂದ ಹಲವು ಮಂದಿ ಪರವಾನಿಗೆ ಪಡೆದುಕೊಂಡಿದ್ದು ಕುದ್ಕೋಳಿ ಫ್ಯೂಯೆಲ್ಸ್ ಅತೀ ಶೀಘ್ರದಲ್ಲಿ ಪ್ರಾರಂಭಗೊಂಡಿದೆ. ಪಂಪ್‌ನಲ್ಲಿ ಎಲ್ಲಾ ವಿಭಾಗದಲ್ಲಿಯೂ ಡಿಜಿಟಲ್ ಸೌಲಭ್ಯಗಳನ್ನು ಒಳಗೊಂಡಿದೆ. ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಎಲ್ಲಾ ಪಂಪ್‌ಗಳಲ್ಲಿಯೂ ವ್ಯಾಪಾರವಿದೆ. ಪಂಪ್‌ನಲ್ಲಿ ಯಾವುದೇ ಕಾರಣಕ್ಕೂ ಖಾಲಿ ಆಗದಂತೆ ನೋಡಿಕೊಳ್ಳುವ ಮೂಲಕ ಅತೀ ಹೆಚ್ಚು ಮಾರಾಟವಾಗುವ ಪಂಪ್ ಆಗಿ ಬೆಳೆಯಲಿ ಎಂದರು.
ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಮಾತನಾಡಿ, ಒಂದು ಕಾಲದಲ್ಲಿ ಹಿಂದುಳಿದಿದ್ದ ಕೋಡಿಂಬಾಡಿ ಈಗ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಅಶೋಕ್ ಕುಮಾರ್ ರೈಯವರು ಶಾಸಕರಾದ ಬಳಿಕ ಮತ್ತಷ್ಟು ಕೋಡಿಂಬಾಡಿಯ ಹೆಸರು ರಾಷ್ಟ್ರಮಟ್ಟದಲ್ಲಿ ಮಿಂಚಿದೆ. ಕೋಡಿಂಬಾಡಿ ಗ್ರಾಮದ ಮಧ್ಯ ಭಾಗದಲ್ಲಿ ಪೆಟ್ರೋಲ್ ಪಂಪ್ ಪ್ರಾರಂಭಗೊಂಡಿದ್ದು ಗ್ರಾಮದ ಜನತೆಗೆ ಅನುಕೂಲವಾಗಲಿದೆ. ಇದಕ್ಕೆ ಗ್ರಾ.ಪಂನಿಂದ ಸಹಕಾರ ನೀಡಲಾಗುವುದು ಎಂದರು.
ಬಿಎಸ್‌ಎಫ್‌ನ ನಿವೃತ್ತ ಕಮಾಂಡೆಂಟ್ ಚಂದಪ್ಪ ಮೂಲ್ಯ ಮಾತನಾಡಿ, ಕೋಡಿಂಬಾಡಿ ಗ್ರಾಮದ ಜನತೆಗೆ ಅವಶ್ಯಕತೆಗನುಗುಣವಾಗಿ ಪೆಟ್ರೋಲ್ ಪಂಪ್ ಪ್ರಾರಂಭಗೊಂಡಿದ್ದು, ಉತ್ತಮ ಸೇವೆಯ ಮೂಲಕ ಯಶಸ್ವಿಯಾಗಿ ಬೆಳೆಯಲಿ ಎಂದರು.
ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ದೀಪ ಬೆಳಗಿಸಿದರು. ಹಿಂದೂಸ್ಥಾನ ಪೆಟ್ರೋಲಿಯಂನ ಏರಿಯಾ ಸೇಲ್ಸ್ ಮ್ಯಾನೇಜರ್ ಇಷಿತ ಗರ್ಗ್ ವಾಹನಗಳಿಗೆ ಗಾಳಿ ತುಂಬಿಸುವ ವಿಭಾಗವನ್ನು ಉದ್ಘಾಟಿಸಿದರು. ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಕುಡಿಯುವ ನೀರಿನ ವಿಭಾಗವನ್ನು ಉದ್ಘಾಟಿಸಿದರು. ನಿವೃತ್ತ ಸಬ್ ಇನ್ಸ್‌ಪೆಕ್ಟರ್ ವಾಸಪ್ಪ, ಕುದ್ಕೋಳಿ ಫ್ಯೂಯೆಲ್ಸ್‌ನ ಪಾಲುದಾರ ಕೆ.ಪುರುಷೋತ್ತಮ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಪೆಟ್ರೋಲ್ ಪಂಪು ಪ್ರಾರಂಭಿಸಲು ನಿವೇಶನ ನೀಡಿದ ಕುದ್ಕೋಳಿ ಕುಟುಂಬದ ಹಿರಿಯರಾದ ರುಕ್ಮಿಣಿ ಮತ್ತು ರತ್ನಾ ಪರಬರಪಾಲು ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ಕೋಡಿಂಬಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್, ನ್ಯಾಯವಾದಿ ಕುಮಾರನಾಥ, ವಿಷ್ಣು ಇಲೆಕ್ಟ್ರಿಕಲ್ಸ್‌ನ ಸುಧಾಕರ, ಕೋಡಿಂಬಾಡಿ ಗ್ರಾ.ಪಂ ಸದಸ್ಯ ರಾಮಚಂದ್ರ ಪೂಜಾರಿ ಶಾಂತಿನಗರ, ವಿಕ್ರಂ ಶೆಟ್ಟಿ ಅಂತರ, ಕೋಡಿಂಬಾಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಬಾಬು ಗೌಡ ಭಂಡಾರದಮನೆ ಸಹಿತ ಹಲವು ಮಂದಿ ಗಣ್ಯರು ಆಗಮಿಸಿ ಸಂಸ್ಥೆಗ ಶುಭಹಾರೈಸಿದರು.
ನಿವೃತ್ತಿ ಜೀವನದಲ್ಲಿ ಸೇವೆ ಮಾಡುವ ಉದ್ದೇಶದಿಂದ ಪೆಟ್ರೋಲ್ ಪಂಪ್ ಪ್ರಾರಂಭಿಸಲಾಗಿದೆ. ಸಂಸ್ಥೆಯಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂನವರ ಪೆಟ್ರೋಲ್, ಡೀಸೆಲ್, ಆಯಿಲ್ ಜೊತೆಗೆ ಗ್ರಾಹಕರಿಗೆ ವಾಹನಗಳಿಗೆ ಉಚಿತ ಗಾಳಿ, ಶುದ್ದ ಕುಡಿಯುವ ನೀರು, ಶೌಚಾಲಯದ ಸೌಲಭ್ಯಗಳಿವೆ. ಮುಂದಿನ ದಿನಗಳಲ್ಲಿ ಸಿಎನ್‌ಜಿ ಹಾಗೂ ಇಲೆಕ್ಟ್ರಿಕ್ ವಾಹನಗಳ ಚಾಜಿಂಗ್ ಪಾಯಿಂಟ್‌ಗಳನ್ನು ಮಾಡುವ ಯೋಜನೆಯಿದೆ. ಪಂಪ್ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ತನಕ ಕಾರ್ಯನಿರ್ವಹಿಸಲಿದೆ. ಈ ಭಾಗದ ಜನತೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸುತ್ತೇವೆ.
-ವೆಂಕಪ್ಪ ನಾಯ್ಕ ಪಾಲುದಾರರು.