Published
6 hours agoon
By
Akkare Newsಮಂಗಳೂರು: ದ.ಕ ಜಿಲ್ಲೆಯ ಏಳು ಗ್ರಾ.ಪಂ ಗಳ ಏಳು ಕ್ಷೇತ್ರಗಳಲ್ಲಿ ನಾಳೆ ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯದಂಗಡಿ ಮುಚ್ಚಲು ದ.ಕ ಡಿಸಿ ಆದೇಶ ಹೊರಡಿಸಿದ್ದಾರೆ.
ನಾಳೆ ಸಂಜೆ ಐದು ಗಂಟೆಯವರೆಗೆ ಉಳ್ಳಾಲದ ಕಿನ್ಯಾ, ಮುನ್ನೂರು, ಬಂಟ್ವಾಳದ ವಿಟ್ಲ ಮುಡೂರು, ಬಾಳ್ತಿಲ, ಬೆಳ್ತಂಗಡಿಯ ಹೊಸಂಗಡಿ, ಪುದುವೆಟ್ಟು ಗ್ರಾಮದಲ್ಲಿ ಮದ್ಯದಂಗಡಿ ಮುಚ್ಚಲಾಗಿದೆ.
ಅಷ್ಟೇ ಅಲ್ಲದೆ ಸುಳ್ಯದ ಕನಕಮಜಲು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದಂಗಡಿಗಳನ್ನು, ಮದ್ಯ ತಯಾರಿಕಾ ಘಟಕಗಳನ್ನು ಅಲ್ಲದೆ ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ.