Published
4 hours agoon
By
Akkare News11 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ: ಪ್ರತಿಯೊಬ್ಬರು ಶಿಕ್ಷಕಿಯರಾಗಿ ನೇಮಕ
ಕಡಬ: ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ಯಾರಿಯರ್ ಟ್ರೈನಿಂಗ್ ಆಶ್ರಯದಲ್ಲಿ ಕಡಬದ ಸೈಂಟ್ ಜೋಕಿಮ್ಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಸ್ಒ 9001:2015 ಪ್ರಮಾಣೀಕೃತ ಐಐಸಿಟಿ ಶಿಕ್ಷಣ ಸಂಸ್ಥೆಯು ಶ್ಲಾಘನೀಯ ಸಾಧನೆ ಮಾಡಿದೆ.
ಈ ಸಂಸ್ಥೆಯಲ್ಲಿ ನಡೆದ ಮೊಂಟೆಸ್ಸರಿ (ನರ್ಸರಿ ಟೀಚರ್ ಟ್ರೈನಿಂಗ್) ಪರೀಕ್ಷೆಗೆ ಹಾಜರಾದ ಎಲ್ಲ 11 ವಿದ್ಯಾರ್ಥಿನಿಯರೂ ಶೇ.100 ಫಲಿತಾಂಶದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಆಶಾರೋಸ್ ಸುಂಕದಕಟ್ಟೆ(97%), ವೈಶಾಲಿ ಕೋಡಿಂಬಾಡಿ(96%), ಅಸಿಯಮ್ಮ ಮರ್ದಾಳ(94%), ಸೌಮ್ಯ ಕೆ ಕುಟ್ರುಪಾಡಿ(94%), ನಸೀಮಾ ಎಚ್ ನೆಲ್ಯಾಡಿ(94%), ಸುರೂರತ್ ಎಂ.ಎಸ್ ಕಡಬ(93%), ಸಂಧ್ಯಾ ಕುಮಾರಿ ಬಿ ಬೆಟ್ಟಂಪಾಡಿ(93%), ಸಂಧ್ಯಾ ಅರಸಿನಮಕ್ಕಿ(93%), ಪುಲಕಿತ ಕೆ.ಪಿ ಪೇರಾಬೆ(91%), ಫಾತಿಮಾ ಅನಿಸಾ ಮರ್ದಾಳ(90%) ಹಾಗೂ ಸ್ವಾತಿ ಎಸ್ ಶಿಶಿಲ(90%) ಅಂಕ ಪಡೆದು ಉತ್ತೀರ್ಣರಾಗಿ,ಈಗಾಗಲೇ ವಿವಿಧ ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕಿಯರಾಗಿ ನೇಮಕಗೊಂಡಿದ್ದಾರೆ.
ಅತ್ಯುತ್ತಮ ಗುಣ ಮಟ್ಟದ ಶಿಕ್ಷಣವನ್ನೂ, ಅತಿ ಕಡಿಮೆ ಶುಲ್ಕದೊಂದಿಗೆ ನುರಿತ ಅಧ್ಯಾಪಕರಿಂದ ಶಿಸ್ತಿನ ಬೋಧನೆಯನ್ನೂ ಒದಗಿಸುವ ಈ ಸಂಸ್ಥೆಯು ಉಚಿತ ಕಂಪ್ಯೂಟರ್ ತರಬೇತಿ, ಸ್ಪೋಕನ್ ಇಂಗ್ಲಿಷ್, ಕರಕುಶಲ ತರಬೇತಿ, ಪ್ರತಿಷ್ಠಿತ ಶಾಲೆಗಳಲ್ಲಿ ಇಂಟರ್ನ್ಶಿಪ್, ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ಸಹಿತ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ. ಇದೊಂದು ಜಾಬ್ ಓರಿಯೆಂಟೆಡ್ ಕೋರ್ಸ್ ಆಗಿದ್ದು, ತರಬೇತಿ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗೆ ಉದ್ಯೋಗದ ಭರವಸೆ ನೀಡುತ್ತಿದೆ.
2025–26ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಆಸಕ್ತರು ಎಂದು ತಿಳಿಸಿದೆ.