Published
2 days agoon
By
Akkare Newsಸದ್ಯಕ್ಕೆ ಗರ್ಭಿಣಿಯರು, ವೃದ್ಧರು, ಉಸಿರಾಟ ಸಮಸ್ಯೆ ಉದ್ದವರು ಮಾಸ್ಕ್ ಧರಿಸಿದರೆ ಸಾಕು. ಉಳಿದ ಜನಸಾಮಾನ್ಯರಿಗೆ ಮಾಸ್ಕ್ ಕಡ್ಡಾಯವಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ರಜೆ ಕೊಡಲಾಗುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸಿಎಂ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಅವರು, ಸದ್ಯಕ್ಕೆ ಲಸಿಕೆ ತೆಗೆದುಕೊಳ್ಳಲು ಯಾವುದೇ ಮಾರ್ಗಸೂಚಿಗಳಿಲ್ಲ. ಲಸಿಕೆ ಬಗ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಬೇಕು. ಶಾಲಾ ಮಕ್ಕಳಿಗೆ ಜ್ವರ ನೆಗಡಿ ಕಂಡು ಬಂದರೆ ರಜೆ ನೀಡಲು ಸಿಎಂ ಸೂಚನೆ ನೀಡಿದ್ದಾರೆ. ಟೆಸ್ಟ್ ಬಗ್ಗೆ ಹಿಂದಿನ ಮಾರ್ಗ ಸೂಚಿಗಳನ್ನು ಅನುಸರಿಸುತ್ತೇವೆ. ಗರ್ಭಿಣಿ, ವಯಸ್ಸಾದವರು ಮಾಸ್ಕ್ ಧರಿಸುವುದು ಉತ್ತಮ. ಕೋವಿಡ್ ಟೆಸ್ಟ್ ಗಳಿಗೆ ಬೇಕಾದ ವ್ಯವಸ್ಥೆ ಗಳನ್ನು ಸಹಾ ನಾವು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಇನ್ನು ಆರೋಗ್ಯ ಸಿಬ್ಬಂದಿ, ಡಾಕ್ಟರ್‌ಗಳು ಯಾರೂ ರಜೆ ಮೇಲೆ ಹೋಗಬಾರದು ಅಂತಾ ಸೂಚನೆ ಕೊಟ್ಟಿದ್ದೇವೆ. ರಾಜ್ಯದಲ್ಲಿ ಕೋವಿಡ್ ಟೆಸ್ಟಿಂಗ್ ಕಿಟ್ ರೆಡಿ ಮಾಡಿಕೊಂಡಿದ್ದೇವೆ. ಮುಂದೆ ಕೇಸ್ ಹೆಚ್ಚಾದರೆ ಅದಕ್ಕೂ ತಯಾರಿ ಇದೆ. ವಿದೇಶದಿಂದ ಬರುವವರ ಸ್ಕ್ರೀನಿಂಗ್ ಮಾಡಲು ಸೂಚಿಸಿದ್ದೇವೆ. ಆದರೆ ಅವರಿಗೆ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದಕ್ಕೆ ಸದ್ಯಕ್ಕೆ ಕಡ್ಡಾಯ ಎಂದು ತಿಳಿಸಿಲ್ಲ. ಪ್ರತಿ ಎರಡು ಮೂರು ದಿನಗಳಿಗೊಮ್ಮೆ ತಜ್ಞರ ಜೊತೆ ಸಂಪರ್ಕ ದಲ್ಲಿ ಇರಲು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಹಿಂದಿನಂತೆ ಕೋವಿಡ್ ಪರೀಕ್ಷೆಯಲ್ಲಿ ರೆಮಿಡೆಸಿವಿರ್, RTPCR ಪ್ರಕ್ಯೂರ್ ಮಾಡ್ತಿದ್ದೇವೆ. ಯಾರಿಗೂ ಕಡ್ಡಾಯವಾಗಿ ಟೆಸ್ಟಿಂಗ್ ಇಲ್ಲ. ಯಾರಿಗೆ ತೀವ್ರ ಅನಾರೋಗ್ಯ ಇರುತ್ತದೆಯೋ ಅವರು ಟೆಸ್ಟಿಂಗ್ ಮಾಡಿಸಿಕೊಳ್ಳಬೇಕು. ಇದು ಕೋವಿಡ್-19 ರೂಪಾಂತರಿ ಹಳೆಯ ಓಮಿಕ್ರಾನ್ ತಳಿ ಆಗಿರುವುದರಿಂದ ಇದರ ದುಷ್ಪರಿಣಾಮ ಹೆಚ್ಚಾಗಿ ಬೀರುವುದಿಲ್ಲ. ಇದೀಗ ಸೋಂಕು ಹರಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಣಾಮವನ್ನು ಕಾದು ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ವಿದೇಶದ ದಿಂದ ಬಂದವರಿಗೆ ಕಡ್ಡಾಯ ಟೆಸ್ಟಿಂಗ್ ಇಲ್ಲ ಎಂದು ತಿಳಿಸಿದರು.