Connect with us

ಇತರ

ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ತಂಬಾಕು ಉಗುಳಿದರೆ ರೂ.1000 ದಂಡ

Published

on

ಈ ಸಂಬಂಧ ರಾಜ್ಯ ಸರ್ಕಾರವು ರೂಪಿಸಿದ್ದ’ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ(ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ವಿತರಣೆಯ ವಿನಿಮಯ)(ಕರ್ನಾಟಕ ತಿದ್ದುಪಡಿ)ಮಸೂದೆ-2024’ಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು ಅವರು ಮೇ.23ರಂದು ಅಂಕಿತ ಹಾಕಿದ್ದರು.ಮೇ 30ರಂದು ಈ ಸಂಬಂಧ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿ, ಕಾಯ್ದೆಯನ್ನು ಜಾರಿಗೆ ತರಲಾಗಿದೆ.

 

21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬೀಡಿ,ಸಿಗರೇಟು ಮತ್ತು ತಂಬಾಕಿನ ಉತ್ಪನ್ನಗಳ ಮಾರಾಟವನ್ನು ಈ ಕಾಯ್ದೆ ನಿಷೇಧಿಸುತ್ತದೆ.ಉಲ್ಲಂಸಿದವರಿಗೆ ರೂ.1,000 ದಂಡ ವಿಧಿಸಬಹುದಾಗಿದೆ.ಉಪಹಾರ ಗೃಹ, ಪಬ್, ಬಾರ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಸೇವೆನೆಗೆ ಅವಕಾಶ ನೀಡುವುದನ್ನೂ ಈ ಕಾಯ್ದೆ ನಿಷೇಧಿಸುತ್ತದೆ. ಈ ನಿಷೇಧವನ್ನು ಉಲ್ಲಂಸಿದವರಿಗೆ ರೂ.50,000ದಿಂದ ರೂ.1 ಲಕ್ಷದವರೆಗೆ ದಂಡ ಮತ್ತು ಒಂದು ವರ್ಷದಿಂದ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

 

 

 

 

 


 

 

Continue Reading
Click to comment

Leave a Reply

Your email address will not be published. Required fields are marked *

Advertisement