Published
9 months agoon
By
Akkare News
ಮಾಣಿ: ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಗಳಲ್ಲಿ ಸಿಂಧೂರ ವನ ಎಂಬ ಹೆಸರಿನಲ್ಲಿ ಪರಿಸರ ದಿನವನ್ನು ಆಚರಿಸಲಾಗಿದೆ. ಈ ಪ್ರಯುಕ್ತ ಜಯ ಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಪರಿಸರ ದಿನಾಚರಣೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ- ಪೆರಾಜೆಯಲ್ಲಿ ,ಗಿಡ ನೆಡುವ ಮೂಲಕ ಸಿಂಧೂರ ವನ” ಕಾರ್ಯಕ್ರಮ ನಡೆಯಿತು.



ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಶಿಕ್ಷಣ, ರೈತರ, ಯೋಧರ, ಮಹಿಳೆಯರ, ಕಾರ್ಮಿಕರ, ದೀನದಲಿತರ ಪರವಾಗಿ ಕಳೆದ ಕೆಲವು ದಶಕಗಳಿಂದ ಚಳುವಳಿಗಳನ್ನು ರೂಪಿಸಿದ ಅನುಭವಿಗಳ, ಬುದ್ದಿಜೀವಿಗಳ, ಪರಿಸರವಾದಿಗಳ, ಸಾಹಿತಿಗಳ, ಲೇಖಕರ, ಎಲ್ಲಾ ವರ್ಗದ ಹೋರಾಟಗಾರರ, ಸ್ವಾಭಿಮಾನಿ ಕಾರ್ಯಕರ್ತರ ಜೊತೆಯಲ್ಲಿ ಪರಿಸರವಾದಿಗಳು, ಕನ್ನಡ ಪರ ಹೋರಾಟಗಾರರು ಮತ್ತು ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರ ನೇತೃತ್ವದ ಜಯಕರ್ನಾಟಕ ಜನಪರ ವೇದಿಕೆ ಪರಿಸರ ಸಂರಕ್ಷಣೆಯ ಮುಖ್ಯ ಉದ್ದೇಶದ ಜೊತೆಯಲ್ಲಿ ಸಂವಿಧಾನ ಮತ್ತು ಕಾನೂನು ಬದ್ದವಾಗಿ ಕರ್ನಾಟಕದ ಸೇವಾ ಕಾರ್ಯ ಚಟುವಟಿಕೆ ಯಲ್ಲಿ ನಿರಂತರವಾಗಿ ಗುರುತಿಸಿ ಕೊಂಡಿದೆ. 

ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ದ.ಕ. ಜಿಲ್ಹಾ ವತಿಯಿಂದ ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ ಸಿಂಧೂರವನ್ನು ಕಳೆದುಕೊಂಡ ನಮ್ಮ ಹೆಣ್ಣುಮಕ್ಕಳಿಗೆ ಮತ್ತು ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಚರಣೆ ನಡೆಸಿ ಉಗ್ರರ ಅಡಗು ತಾಣವನ್ನೇ ಧ್ವಂಸ ಮಾಡಿದ ವೀರ ಯೋಧರಿಗೆ ಗೌರವ ಸೂಚಿಸುವ ಮುಖ್ಯ ಉದ್ದೇಶದಿಂದ “ಸಿಂಧೂರ ವನ” ಎಂಬ ಹೆಸರಿನಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. 
ಮುಖ್ಯ ಅತಿಥಿಗಳಾಗಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ- ಪೆರಾಜೆ ಇದರ ಸೆಕ್ರೆಟರಿ ಮಹೇಶ್ ಜೆ ಶೆಟ್ಟಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,ಮುಖ್ಯ ಶಿಕ್ಷಕಿ ಸುಪ್ರಿಯಾ.ಡಿ, ಸದಾಶಿವ ಶೆಟ್ಟಿ ಮಾಣಿ, ಸತೀಶ್ ಪೂಜಾರಿ ಬಾಕಿಲ ಶಾಲಾ ವ್ಯವಸ್ಥಾಪಕರಾದ ನಯನ, ದೈಹಿಕ ಶಿಕ್ಷಕರಾದ ದಿನಾಕರ್ ಪೂಜಾರಿ, ಬಾಲವಿಕಾಸ ಶಾಲೆಯ ಶಿಕ್ಷಕರು, ವಿಶೇಷವಾಗಿ ಮಹಿಳಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. 

ಜಯ ಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಕಾರ್ತಿಕ್ ರೈ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕರಾದ ರಾಮ್ ದಾಸ್ ಶೆಟ್ಟಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಜ್ಯೋತಿ ಪ್ರಕಾಶ್ ಪುಣಚ, ನಿರಂಜನ್ ರೈ ಕುರ್ಲೆತ್ತಿಮಾರ್, ರಾಜೀವ್ ವಿಟ್ಲ, ಪ್ರವೀಣ್ ನಾಯ್ಕ್ ಅನಂತಾಡಿ, ರಾಜೇಶ್ ನಾಯಕ್, ಪ್ರಭಾಕರ ಅಮೈ, ಪವನ್ ರೈ ಬೆಳ್ಳಾರೆ, ಆದೇಶ್ ಪಂಡಿತ್ ಅನಂತಾಡಿ, ತಿಲಕ್ ರಾಜ್ ಶೆಟ್ಚಿ ಉಪಸ್ಥಿತರಿದ್ದರು.






