Published
3 hours agoon
By
Akkare Newsಉಡುಪಿ:ಮತ್ತೊಮ್ಮೆ ಕೊರಗಜ್ಜನ ಪವಾಡ ನಡೆದಿದೆ. ದೈವ ನುಡಿದಂತೆ ದೇಗುಲದಲ್ಲಿ ಹುಂಡಿ ಕದ್ದ ಕಳ್ಳ ಕದ್ದಿರುವ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದಾನೆ.
ಉಡುಪಿಯ ಹೆಬ್ರಿ ತಾಲೂಕು ಮುದ್ರಾಡಿ ದೇಗುಲದಲ್ಲಿ ಮೇ 25 ರಂದು ಕಳ್ಳನೋರ್ವ ಮುದ್ರಾಡಿ ಆದಿಶಕ್ತಿ ದೇಗುಲದ ಕಲ್ಕುಡ-ಕಲ್ಲುರ್ಟಿ, ಕೊರಗಜ್ಜ ಸನ್ನಿದಾನದ ಹುಂಡಿ ಕದ್ದು ಪರಾರಿಯಾಗಿದ್ದ. ಇದ್ರಿಂದ ಬೇಸರಗೊಂಡ ಧರ್ಮದರ್ಶಿ ಸುಕುಮಾರ್ ಮೋಹನ್ ದೈವದ ಮೊರೆ ಹೋಗಿದ್ದರು.
ಕಲ್ಕುಡ-ಕಲ್ಲುರ್ಟಿ ದೈವ ಹತ್ತು ದಿನಗಳಲ್ಲಿ ಕಳ್ಳನ ಪತ್ತೆ ಮಾಡಿಕೊಡುವುದಾಗಿ ಭರವಸೆ ನೀಡಿತ್ತು. ಕೊರಗಜ್ಜ ದೈವ 9 ದಿನದಲ್ಲೇ ಕಳ್ಳ ಮತ್ತೆ ಬಂದು ಸಿಕ್ಕಿ ಬೀಳುತ್ತಾನೆ ಎಂದು ಅಭಯ ನೀಡಿತ್ತು. ಅದ್ರಂತೆ ಮೂರೇ ದಿನಗಳಲ್ಲಿ ಕಳ್ಳ ಎರಡನೇ ಬಾರಿ ಹುಂಡಿ ಕದಿಯಲು ಬಂದಿದ್ದು, ಭಕ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ದಾವಣಗೆರೆ ಮೂಲದ ಸಲ್ಮಾನ್ ಎಂಬಾತ ಸೆರೆಯಾಗಿದ್ದಾನೆ.