Connect with us

ಇತರ

ಮೌನಕ್ಕೆ ಜಾರಿದ ಕಲ್ಲಡ್ಕ ಮೇಲೆ ಹಾರಿದ ರಸ್ತೆ, ಮೌನಗೊಂಡ ಹೃದಯ…

Published

on

ಕಲ್ಲಡ್ಕ : ಫ್ಲೈಓವರ್ ಇಂದ ಕಲ್ಲಡ್ಕ ಮೌನವಾಗಿದೆ ಒಂದು ಕಾಲದಲ್ಲಿ,ಕಲ್ಲಡ್ಕ ಎಂದರೆ ಕೇವಲ ಊರಲ್ಲ,ಅದು ಜೀವಂತ ಸಂಭಾಷಣೆ, ದಟ್ಟ ಹರಟೆ, ಮತ್ತು ಟೀ ಸವಿಯುವ,ತಾತ್ವಿಕತೆಯ ಸ್ಥಳವಾಗಿತ್ತು.KT ಹೋಟೆಲ್ ಮುಂದೆ ನಿಲ್ಲುವ ಜನ, ಬಸ್ಸುಗಳಿಂದ ಹರಿಯುವ ಧ್ವನಿ, ಟ್ರಾಫಿಕ್ ಜಾಮ್ ಲ್ಲಿ ಬಿಕ್ಕಾಡಿದ ಕೂಗು…ಈ ಎಲ್ಲಾ ಶಬ್ದಗಳು ಕಲ್ಲಡ್ಕದ ಸ್ಪಂದನೆಗಳಾಗಿದ್ದವು.ಆದರೆ ಇಂದು…ರಸ್ತೆ ಮೇಲಿಂದ ಹಾರುತ್ತಿದೆ ಫ್ಲೈಓವರ್,ಆಗಿದೆ ಆದರೆ ಕೆಳಗಡೆಯ ಹೃದಯ – ಅದು ಮೌನವಾಗಿದೆ.ನಿತ್ಯ ಒತ್ತಡದಲ್ಲಿ ದೌಡಾಯಿಸುತ್ತಿದ್ದ ರಸ್ತೆ ಇಂದು ಖಾಲಿ,ಬದಿಯ ಟೀ ಅಂಗಡಿಯಲ್ಲ್ಲಿ ಪ್ರೀತಿ ತುಂಬಿದ ಚಹಾ ಇಂದಿಲ್ಲ,ವ್ಯಾಪಾರಿ ಬಾಗಿಲಿನಲ್ಲಿ ನಿಂತು ಕಾಯುತ್ತಿದ್ದಾನೆ,ಆದರೆ “ಬಿಗ್ ಜಾಮ್ ಬಂದಿದೆ ಅಲ್ವಾ?” ಅಂತಾ ಮಾತಾಡುವ ಗ್ರಾಹಕರಿಲ್ಲ.ಈಗ ಕಲ್ಲಡ್ಕ ಪ್ರಜ್ವಲಿಸುತ್ತಿದೆ– ಆದರೆ ಹಾಡುವುದಿಲ್ಲ.

 

ಅದು ಪ್ರಗತಿಯ ಹೆಜ್ಜೆ ಹಾಕಿದರೂ, ನೆನಪುಗಳ ಕೂಗನ್ನು ದಾಟಿ ಆಗಿದೆ .KT ಹೋಟೆಲ್ ಚಹಾದ ಮೆತ್ತಗಿನ ಬಾಷ್ಪ,ಇಂದಿಗೂ ಮೆಮೊರಿಯಲ್ಲಿದೆ – ಆದರೆ ಅದಕ್ಕೆ ಜತೆಗಾರರಿಲ್ಲ.ಫ್ಲೈಓವರ್ ಮೇಲಾಗಿದ ವಾಹನವೊಂದು ಕೆಳಗಡೆ ನಿಲ್ಲುವುದು ಇಲ್ಲ,ಅದೊಂದು ಕಾಲದ ಲೈಫ್‌ಲೈನ್‌ ಇಂದು ಶಾಂತಿಯ ಹೆಸರಿನಲ್ಲಿ ತೀರ ನಿಶ್ಯಬ್ದವಾಗಿದೆ.“ಕಾಲ ಚಲಿಸಿದೆ, ಕಲ್ಲಡ್ಕ ಬದಲಾಗಿದೆ,ಆದರೆ ಕೆಲವು ಊರುಗಳು, ಕೆಲವು ರಸ್ತೆಗಳು –ಶಬ್ದವಿಲ್ಲದ ಮೌನದಲ್ಲೂ ನಿಜವಾದ ಕಥೆ ಹೇಳುತ್ತವೆ.”⸻ಬದಲಾವಣೆ ಜಗದ ನಿಯಮ.

 

 

 

 

 

 

 

 


 

 

Continue Reading
Click to comment

Leave a Reply

Your email address will not be published. Required fields are marked *

Advertisement