Published
22 hours agoon
By
Akkare Newsಗುಜರಾತ್ ನಲ್ಲಿ ಇಂದು ಘೋರವಾದ ದುರಂತ ಒಂದು ಸಂಭವಿಸಿದ್ದು, ಅಹ್ಮದಾಬಾದ್ ಏರ್ಪೋರ್ಟ್ ಬಳಿಯೇ ವಿಮಾನ ಒಂದು ಪತನವಾಗಿದೆ. ಟೇಕಾಫ್ ಆಗುವಾಗ ವಿಮಾನ ತಾಂತ್ರಿಕ ದೋಷದಿಂದ ಪತನವಾಗಿದೆ ಎಂದು ತಿಳಿದುಬಂದಿದೆ.
ಅಹಮದಾಬಾದ್ ನಿಂದ ಏರ್ ಇಂಡಿಯಾನಾ ವಿಮಾನ ಲಂಡನ್ ಗೆ ತೆರಳುತ್ತಿದ್ದ ವಿಮಾನ ಟೇಕಾಪ್ ಆದ ಕೆಲವೇ ಕ್ಷಣದಲ್ಲಿ ಪತನವಾಗಿದೆ. ಗಾಯಾಳುಗಳನ್ನು ಅಹ್ಮದಾಬಾದ್ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಏರ್ಪೋರ್ಟ್ ಬಳಿ ವಿಮಾನ ಹೊತ್ತಿ ಉರಿಯುತ್ತಿದೆ.
ವಿಮಾನದಲ್ಲಿ 133 ಪ್ರಯಾಣಿಕರು ಇರುವ ಮಾಹಿತಿ ಇದೆ. ವಿಮಾನದಲ್ಲಿ ಸಿಬ್ಬಂದಿಗಳು ಸೇರಿದಂತೆ ಒಟ್ಟು 133 ಪ್ರಯಾಣಿಕರು ಇರುವ ಮಾಹಿತಿ ಇದ್ದು, ಇದರಲ್ಲಿ 130 ಮಂದಿ ಸಾವನ್ನಪ್ಪಿದ್ದಾಗಿ ಹೇಳಲಾಗಿದೆ. ಗುಜರಾತ್ನ ಅಹ್ಮದಾಬಾದ್ ಏರ್ಪೋರ್ಟ್ ಬಳಿಯೇ ಈ ಒಂದು ದುರಂತ ಸಂಭವಿಸಿದ್ದು, ಸಾವು ನೋವಿನ ಕುರಿತಂತೆ ನಿಖರ ಮಾಹಿತಿ ನಿರೀಕ್ಷಿಸಲಾಗುತ್ತಿದೆ.