Published
9 months agoon
By
Akkare News
ಕೆಂಪು ಕಲ್ಲು ಪಾಯ, ಕೆಂಪು ಕಲ್ಲು ಸಾಗಾಟ, ಮರಳು ಎಲ್ಲವೂ ಸರ್ಕಾರದ ಅತೀ ಕಾನೂನು ರೂಲ್ಸ್ ನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಿರ್ದಿಷ್ಟಾವಧಿ ಬಂದು ಆಗಿದೆ ಆದರೆ ರಾಜಾರೋಷವಾಗಿ ಮರ ಸಾಕಾಣಿಕೆ ನಡೆಯುತ್ತಿದೆ ಕಾರಣ ಏನಿರಬಹುದು… ಕೆಂಪು ಕಲ್ಲು ಮರಳಿಗೆ ಇದ್ದ ಕಾನೂನು ರೂಲ್ಸ್ ಮರಸಾಗಾಣಿಕೆಗೆ ಇಲ್ಲವೇ…


ಜನಸಾಮಾನ್ಯರೀಗೆ ಒಂದು ಕಾನೂನು ರಾಜಕೀಯ ಪ್ರೇರಿತರೀಗೆ ಒಂದು ಕಾನೂನು ಸರಿಯೇ, ಒಂದು ಮರ ಕಡಿದು ಸಾಗಾಣಿಕೆ ಮಾಡ ಬೇಕಾದರೆ ಪರ್ಮಿಟ್ ಅವಶ್ಯಕ ಜೊತೆಗೆ ಪರ್ಮಿಟ್ ರಹಿತವಾಗಿ ಸಿಕ್ಕಿದರೆ ವಾಹನ ಸಮೇತರಾಗಿ ಜಪ್ತಿ ಆಗುವ ಒಂದು ಕಾಲವಿತ್ತು ಇವತ್ತಿಗೂ ಜಪ್ತಿಯಾದ ವಾಹನಗಳು ತುಕ್ಕು ಹಿಡಿದು ಹೋಗಿದೆ ಆದರೆ ಅವತ್ತಿನ ಕಾನೂನು ಇವತ್ತು ಮೂರು ಸಾಗಾಟಕ್ಕೆ ಯಾಕೆ ಇಲ್ಲ, ರಾಜಾರೋಷವಾಗಿ ಪುತ್ತೂರು ಬೈಪಾಸ್ ರೋಡಿನಲ್ಲಿ ಪರ್ಮಿಟ್ ರಹಿತವಾಗಿ ಮರ ಸಾಗಾಟ ಆಗುತ್ತಿದ್ದರೂ ಅರಣ್ಯ ಅಧಿಕಾರಿಗಳು ಯಾಕೆ ಸುಮ್ಮನೆ ಕೂತಿದ್ದಾರೆ,


ಕೆಂಪು ಕಲ್ಲು ಪಾಯ ಮತ್ತು ಮರಳುಗಾರಿಕೆಗೆ ಅವತ್ತು ಇಲ್ಲದ ಕಾನೂನು ಈಗ ಹೊಸ ಹೊಸ ಕಾನೂನು ತಂದು ಬಂದ್ ಮಾಡುವ ಪರಿಸ್ಥಿತಿ ಬಂದಿದೆ, ಅದೆಷ್ಟೋ ಬಡಮನೆಮಂದಿಗಳ ಜೀವನಪಯೋಗಕ್ಕೆ ಉದ್ಯೋಗ ಮಾಡಿಕೊಂಡು ಬರುತ್ತಿದ್ದ ಕಾರ್ಮಿಕರ ಮೇಲೆ ಕಠಿಣ ಕಾನೂನು ರೂಲ್ಸ್ ಅವಶ್ಯಕವಾದರು ಏನು, ಆದರೆ ರಾಜಕೀಯ ಪ್ರೇರಿತರ ಜನಪ್ರತಿನಿಧಿಗಳ ಸಹಾಯದಿಂದ ಹಾಡು ಹಗಲೆ ದರೋಡೆ ಮಾಡುತ್ತಿರುವ ಮರ ಸಾಗಾಣಿಕೆ ಕಡಿವಾಣ ಇಲ್ಲ ಯಾಕೆ…..?
ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸ್ವಲ್ಪ ಅಕ್ರಮ ಮರ ಸಾಗಾಣಿಕೆಗೆ ಕ್ರಮ ಕೈಗೊಳ್ಳಬೇಕು.










