Published
9 months agoon
By
Akkare News
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರರವರ ಹೆಸರಿನಲ್ಲಿ ಪೇಸ್‌ಬಕ್‌ನಲ್ಲಿ ನಕಲಿ ಖಾತೆಯನ್ನು ಸೃಷ್ಠಿಸಲಾಗಿದೆ. ಖದೀಮರು ರಾಮಚಂದ್ರ ಪುತ್ತೂರು (Ramachandra Puttur) ಎಂಬ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಠಿಸಿದ್ದು ಅನೇಕ ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರೆ. ಈಗಾಗಲೇ ಸುಮಾರು 9 ಮಂದಿ ಈ ಪ್ರೆಂಡ್ ರಿಕ್ವೆಸ್ಟನ್ನು ಮಾನ್ಯ ಮಾಡಿದ್ದು ಅವರಿಗೆ ಮೆಸೆಂಜರ್ ಮೂಲಕ “ನನಗೆ ಸಹಾಯ ಬೇಕು” “ನಿಮ್ಮಲ್ಲಿ ಗೂಗಲ್ ಪೇ, ಪೇಟಿಎಮ್ ಇದೆಯೇ” ಎಂದು ಮೆಸೇಜ್ ಮಾಡಿ ಹಣ ದೋಚಲು ಸಂಚು ರೂಪಿಸಿದ್ದಾರೆ.



ಕಡಬದ ಜಯರಾಜ್ ಎಂಬವರಿಗೆ ಈ ರೀತಿ ಮೋಸ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರರಲ್ಲಿ ಪ್ರಶ್ನಿಸಿದಾಗ, ಇದೊಂದು ನಕಲಿ ಖಾತೆಯಾಗಿದ್ದು ದಯವಿಟ್ಟು ಯಾರೂ ಈ ಖಾತೆ ಕಳುಹಿಸುವ ಫ್ರೆಂಡ್ ರಿಕ್ವೆಸ್ಟ್‌ಗೆ ಸ್ಪಂದಿಸಬಾರದು ಎಂದು ಮನವಿ ಮಾಡಿದ್ದಾರೆ. ಇವರು ಮೆಸೆಂಜರ್ ಮೂಲಕ ಕಳುಹಿಸುವ ಸಹಾಯದ ಬೇಡಿಕೆಯನ್ನೂ ಮಾನ್ಯ ಮಾಡಬಾರದಾಗಿ ಕೇಳಿಕೊಂಡಿದ್ದಾರೆ. ಈ ಖಾತೆಯನ್ನು ಬ್ಲಾಕ್ ಮಾಡಿ ಪೇಸ್‌ಬುಕ್‌ಗೆ ರಿಪೋರ್ಟ್ ಮಾಡುವಂತೆಯೂ ಅವರು ಜನರಲ್ಲಿ ವಿನಂತಿಸಿದ್ದಾರೆ.












