Connect with us

ಇತರ

ಪ್ರಭಾಕರ ಸಾಲಿಯಾನ್ ಬಾಕಿಲಗುತ್ತುರವರಿಗೆ ದ್ವಿತೀಯ ಬಾರಿಗೆ ಬಾಹುಬಲಿ ಪ್ರಶಸ್ತಿ

Published

on

ಪುತ್ತೂರು: ಕಳೆದ ಎರಡು ವರ್ಷಗಳಲ್ಲಿ ಉಚಿತ ಥೆರಪಿ ಮೂಲಕ ಸಾವಿರಾರು ಫಲಾನುಭವಿಗಳಿಗೆ ಆರೋಗ್ಯ ಕ್ಷೇತ್ರದಲ್ಲಿ ಆರೋಗ್ಯ ಒದಗಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟ ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರಿನ ಮುಖ್ಯಸ್ಥ ಕೆ.ಪ್ರಭಾಕರ್ ಸಾಲಿಯಾನ್ ರವರಿಗೆ ದ್ವಿತೀಯ ಬಾರಿಗೆ ಕಂಪಾನಿಯೋ ಕಂಪೆನಿಯು ಪ್ರತಿಷ್ಠಿತ ಬಾಹುಬಲಿ ಪ್ರಶಸ್ತಿ ನೀಡಿ ಗೌರವಿಸಿದೆ.


ಬೆಂಗಳೂರಿನ ಗೋಲ್ಡನ್‌ ಮೆಟ್ರೋ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರಿನ ಮುಖ್ಯಸ್ಥ ಕೆ.ಪ್ರಭಾಕರ್ ಸಾಲಿಯಾನ್ ರವರಿಗೆ ಬಾಹುಬಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಂಪಾನಿಯೋ ಕಂಪೆನಿಯ ಮುಖ್ಯ ಪ್ರವರ್ಥಕರಾದ ರತ್ನಾಕರ ಶೆಟ್ಟಿ,  ಸೀತಾರಾಮ್ ಶೆಟ್ಟಿ, ಶ್ರೀಮತಿ ಲತಾರವರು ಪ್ರಶಸ್ತಿ ಪ್ರದಾನ ಮಾಡಿದರು. ಕೆ.ಪ್ರಭಾಕರ ಸಾಲಿಯಾನ್ ರವರು ಕಳೆದ ಎರಡು ವರ್ಷಗಳಲ್ಲಿ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ಸುಮಾರು 89 ಉಚಿತ ಥೆರಪಿ ಶಿಬಿರಗಳನ್ನು ನಡೆಸಿ 42 ಸಾವಿರ ಜನರಿಗೆ ಹಾಗೂ 1.60 ಲಕ್ಷ ಉಚಿತ ಆರೋಗ್ಯ ಥೆರಪಿಯನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ.

 

 

ಪ್ರಸ್ತುತ ಪುತ್ತೂರಿನ ಕಲ್ಲಾರೆಯ ಪವಾಜ್ ಕಾಂಪ್ಲೆಕ್ಸ್ ನಲ್ಲಿ ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಎಂಬ ಸ್ವಂತ ಸಂಸ್ಥೆಯನ್ನು ಹೊಂದಿ ಸೇವೆಯನ್ನು ನೀಡುತ್ತಿದೆ. ಕೆ.ಪ್ರಭಾಕರ್ ಸಾಲಿಯಾನ್ ರವರು ಪುತ್ತೂರು ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷರಾಗಿ, ನರಿಮೊಗರು ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ದ.ಕ ಜಿಲ್ಲಾ ಜೆ.ಡಿ.ಎಸ್ ಹಿಂದುಳಿದ ವರ್ಗದ ಅಧ್ಯಕ್ಷರಾಗಿದ್ದಾರೆ. ಇತ್ತೀಚೆಗೆ ನಡೆದ ಯುವವಾಹಿನಿ ಮಂಗಳೂರು ಕೇಂದ್ರದ ವ್ಯಾಪ್ತಿಗೊಳಪಟ್ಟ ವಿವಿಧ ಘಟಕಗಳ ಅಂತರ್ ಘಟಕ ಜಾನಪದ ಸಾಂಸ್ಕೃತಿಕ ಸ್ಪರ್ಧೆಯಾಗಿರುವ “ಡೆನ್ನಾನ ಡೆನ್ನನ” ಕಾರ್ಯಕ್ರಮವನ್ನು ಕೆ. ಪ್ರಭಾಕರ್ ಸಾಲಿಯಾನ್ ರವರ ಸಂಚಾಲಕತ್ವದಲ್ಲಿ ಯಶಸ್ವಿಯಾಗಿ ಮುನ್ನೆಡೆಸಿದ್ದರು. ಕೆ.ಪ್ರಭಾಕರ್ ಸಾಲಿಯಾನ್ ರವರು ಈ ಹಿಂದೆ ನರಿಮೊಗರು ನಿವಾಸಿಯಾಗಿದ್ದು, ಪ್ರಸ್ತುತ ಕೋಡಿಂಬಾಡಿ ಇಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಪತ್ನಿ ತುಳಸಿ, ಪುತ್ರ ವಿವೇಕ್, ಪುತ್ರಿ ಪ್ರಥ್ವಿರವರೊಂದಿಗೆ ವಾಸ್ತವ್ಯ ಹೊಂದಿದ್ದಾರೆ.

 



 

Continue Reading
Click to comment

Leave a Reply

Your email address will not be published. Required fields are marked *

Advertisement