Published
8 months agoon
By
Akkare News
ಪುತ್ತೂರು : ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಶಾಲಾ ನಾಯಕರುಗಳ ಪಾತ್ರ ಬಹಳ ಮುಖ್ಯವಾಗಿದೆ. ನಾಯಕರು ಸಶಕ್ತರಾದಾಗ ಸಂಸ್ಥೆಯಾಗಲಿ ಅಥವಾ ದೇಶವಾಗಲಿ, ದೃಢವಾಗಲು ಸಾಧ್ಯ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಬಾಲಚಂದ್ರ ಬಾರ್ತಿಕುಮೇರು ಅವರು ಹೇಳಿದರು .ಅವರು ಇಲ್ಲಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸರಕಾರದ ನೂತನ ಮಂತ್ರಿ ಮಂಡಲದ ಅನುಷ್ಠಾನಾಧಿಕಾರಿಗಳಾಗಿ ಭಾಗವಹಿಸಿ ಮಾತನಾಡಿದರು .ಸುಂದರವಾದ ಸ್ವಚ್ಛವಾದ ವಾತಾವರಣದಲ್ಲಿ ನಿರ್ಮಾಣವಾಗಿರುವ ಇಂತಹ ಶಿಕ್ಷಣ ಸಂಸ್ಥೆಯಲ್ಲಿ
ಕಲಿಯುತ್ತಿರುವ ನೀವೇ ಧನ್ಯರು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಈ ಶಾಲೆಯ ಕ್ರೀಡಾಸಕ್ತ ವಿದ್ಯಾರ್ಥಿಗಳು ಇಚ್ಚಿಸಿದ್ದಲ್ಲಿ ಉಚಿತ ತರಬೇತಿಯನ್ನು ನೀಡುವ ಆಶ್ವಾಸನೆ ನೀಡಿದರು .




ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಅಧ್ಯಕ್ಷ ಶ್ರೀ ವೆಂಕಟರಮಣ ಗೌಡ ಮಾತನಾಡಿ ನಾಯಕತ್ವದ ವಿಧಗಳು ಜವಾಬ್ದಾರಿಗಳ ಕುರಿತು ಕಿವಿಮಾತು ನೀಡಿದರು.
ಶಾಲಾ ಸಂಚಾಲಕ ಎ. ವಿ ನಾರಾಯಣ ಮತ್ತು ಆಡಳಿತ ಅಧಿಕಾರಿ ಗುಡ್ಡಪ್ಪಗೌಡ ಬಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಎರಡನೇ ತರಗತಿಯ ಶಿವಾನಿ ಮತ್ತು ತಂಡ ಪ್ರಾರ್ಥಿಸಿದರು. ಶಿಕ್ಷಕಿ ಹಿತಶ್ರೀ ಸ್ವಾಗತಿಸಿದರು. ಐದನೇ ತರಗತಿಯ ಅದ್ವಿಕ್ ಬಂಜನ್ ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ಶಿಕ್ಷಕಿ ಸುಚಿತ ವಿದ್ಯಾರ್ಥಿ ಸರಕಾರ ರಚನೆಯ ಪ್ರಕ್ರಿಯೆಯನ್ನು ವಿವರಿಸಿದರು. ಪ್ರಾಂಶುಪಾಲರಾದ ಅಮರನಾಥ ಪಟ್ಟೆ ಪ್ರಮಾಣವಚನ ಬೋಧಿಸಿದರು .ಶಿಕ್ಷಕಿ ಸವಿತಾ ಕುಮಾರಿ ವಿದ್ಯಾರ್ಥಿ ಸರಕಾರದ ಪದಾಧಿಕಾರಿಗಳ ಜವಾಬ್ದಾರಿಯನ್ನು ವಿವರಿಸಿದರು. ಶಿಕ್ಷಕಿ ಶ್ವೇತ ವಂದಿಸಿದರು.
ಶಿಕ್ಷಕಿ ರಾಧಾ ಕಾರ್ಯಕ್ರಮವನ್ನು ನಿರೂಪಿಸಿದರು.







