Published
8 months agoon
By
Akkare News
ನೆಲ್ಯಾಡಿ: ಶಿರಾಡಿ ಗ್ರಾಮದ ಗುಂಡ್ಯ ಪ್ರದೇಶದ ಗುಂಡ್ಯಹೊಳೆಯಲ್ಲಿ ಜು.13ರಂದು ಅಪರಾಹ್ನದ ವೇಳೆಗೆ ಒಂದು ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.


ಹೊಳೆಯಲ್ಲಿ ತೇಲಿಬಂದ ಶವ ಪೊದರಿನ ನಡುವೆ ಸಿಲುಕಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಈ ಬಗ್ಗೆ ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.



ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಪುತ್ತೂರಿನ ಅಗ್ನಿಶಾಮಕ ದಳದ ಸಹಾಯದಿಂದ ಶವವನ್ನು ಹೊಳೆ ನೀರಿನಿಂದ ಹೊರತೆಗೆದರು. ಮೃತ ವ್ಯಕ್ತಿಯು ಸುಮಾರು 35 ವರ್ಷದ ಗಂಡಸನಾಗಿದ್ದು, ಯಾರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.





