Published
8 months agoon
By
Akkare News
ಬನ್ನೂರು ನಿವಾಸಿ, ಉದ್ಯಮಿ ಸೀತಾರಾಮ ರೈ (65) ಅವರು ಮಂಗಳವಾರ ಮಧ್ಯಾಹ್ನ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.


ಕನ್ನಡದ ಅಪ್ಪಟ ಪ್ರೇಮಿಯಾಗಿದ್ದ ಇವರು, ಪ್ರತಿವರ್ಷ ಕನ್ನಡ ರಾಜ್ಯೋತ್ಸವದಂದು ಕನ್ನಡ ಧ್ವಜ ವಿತರಿಸುತ್ತಿದ್ದರು. ಕನ್ನಡ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಇವರು, ಯಕ್ಷಗಾನದ ಉತ್ಸಾಹಿ ಪ್ರೇಮಿಯೂ ಆಗಿದ್ದರು. ದಿ. ಚಿದಾನಂದ ಕಾಮತ್ ಕಾಸರಗೋಡು ಅವರ ಸಾಂಸ್ಕೃತಿಕ ಕಲಾಕೇಂದ್ರ, ಬೊಳುವಾರು ಇದರ ಎಲ್ಲಾ ಕನ್ನಡ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕನ್ನಡ ರಾಜ್ಯೋತ್ಸವದಂದು ಸೈಕಲ್ ನಲ್ಲಿ ಪುತ್ತೂರು ಪೇಟೆ ತಿರುಗಿ ಕನ್ನಡ ಧ್ವಜ ಪ್ರದರ್ಶನ ಮಾಡುತ್ತಿದ್ದರು.

ಅರುಣ ಥಿಯೇಟರ್ ಸಮೀಪ ಹೊಟೇಲ್ ವ್ಯವಹಾರ ಹಾಗೂ ಹಳೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅಂಗಡಿ ವ್ಯವಹಾರ ನಡೆಸುತ್ತಿದ್ದರು. ಇತ್ತಿಚಿನ ಕೆಲ ವರ್ಷಗಳಿಂದ ಜಿಎಲ್ ವನ್ ಮಾಲ್ ಸಮೀಪ ಕಬ್ಬಿನ ಜ್ಯೂಸ್ ಅಂಗಡಿ ವ್ಯವಹಾರ ನಡೆಸುತ್ತಿದ್ದರು.






