Published
8 months agoon
By
Akkare News
ಪುತ್ತೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಅಶೋಕ್ ಕುಮಾರ್ ರೈಯವರು ತನ್ನ ಅವಿರತ ಶ್ರಮ ಹಾಗೂ ಪರಿಶ್ರಮದ ಮೂಲಕ ಎಐಸಿಸಿ ಹಾಗೂ ಕೆಪಿಸಿಸಿಯ ಮಧ್ಯೆ ಸಮನ್ವಯ ಸಾಧಿಸಿ ಅತ್ಯಂತ ಅಲ್ಪಾವಧಿಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ಸಿನಿಂದ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನನ್ನು ಬೇರ್ಪಡಿಸಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಗ್ರಾಮ ಪಂಚಾಯತಿ ಉಪ್ಪಿನಂಗಡಿಯ ಒಂದನೇ ವಾರ್ಡಿನ ಸದಸ್ಯರೂ ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆಯನ್ನ ನಿರ್ವಹಿಸುತ್ತಿರುವಂತಹಾ ನಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಮಹಮ್ಮದ್ ತೌಸೀಫ್ ಯು ಟಿ ಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿರುತ್ತಾರೆ.


ಈ ಸಂಭ್ರಮಕ್ಕೋಸ್ಕರ ಶಾಸಕರೊಂದಿಗೆ ಶ್ರೀ ಮಹಮ್ಮದ್ ತೌಸೀಫ್ ಯು ಟಿಯವರ ನೇತೃತ್ವದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಡಾ. ರಾಜಾರಾಮ್, ಪ್ರಸನ್ನ ಕುಮಾರ್ ಸಿಝ್ಲರ್, ನಝೀರ್ ಮಠ, ಆದು ಕೊಪ್ಪಳ, ಶಬೀರ್ ಕೆಂಪಿ, ವಿನಾಯಕ ಪೈ, ಜಯಪ್ರಕಾಶ್ ಬದಿನಾರು, ಸತೀಶ್ ನಿಡ್ಪಳ್ಳಿ, ಉಮೇಶ್ ರಾಮನಗರ, ಇರ್ಷಾದ್ ಯು ಟಿ, ಬಶೀರ್ ಪರ್ಲಡ್ಕ, ಅನಿ ಮಿನೇಜಸ್, ಶುಕೂರ್ ಮೇದರಬೆಟ್ಟು, ವೆಂಕಪ್ಪ, ಫೌಝರ್ ಯು ಟಿ, ರಫೀಕ್ ಕೆರಮೂಲೆ, ಶುಕೂರ್ ಎಷ್ಟೂ, ರಿಜ್ವಾನ್ ಎವೈಎಂ, ಖಾದರ್ ನೆಕ್ಕಿಲಾಡಿ ಉಪಸ್ಥಿತರಿದ್ದರು.










