Connect with us

ಇತರ

ನಿಮಿಷಾ ಪ್ರಿಯಾ ಭೇಟಿ: ಯೆಮೆನ್‌ ಪ್ರಯಾಣಕ್ಕೆ ಮುಂದಾದ ಪತಿ, ಪುತ್ರಿ

Published

on

ನವದೆಹಲಿ: ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ನರ್ಸ್‌ ನಿಮಿಷಾ ಪ್ರಿಯಾ ಅವರನ್ನು ಭೇಟಿ ಮಾಡಲು ಅವರ ಪತಿ ಥಾಮಸ್‌ ಮತ್ತು 13 ವರ್ಷದ ಮಗಳು ಮಿಶೆಲ್‌ ಯೆಮನ್‌ಗೆ ತೆರಳಿದ್ದಾರೆ. ಅವರು ಅಲ್ಲಿ ಸಾನಾದ ಜೈಲಿನಲ್ಲಿರುವ ನಿಮಿಷಾ ಪ್ರಿಯಾರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಜೊತೆಗೆ ನಿಮಿಷಾ ಅವರಿಂದ ಹ*ತ್ಯೆಯಾದ ಯೆಮೆನ್‌ ಪ್ರಜೆ ಮೆಹ್ದಿ ಕುಟುಂಬಸ್ಥರನ್ನು ಭೇಟಿ ಮಾಡುವ ನಿರೀಕ್ಷೆ ಇದೆ.

ಕ್ರೈಸ್ತಧರ್ಮ ಪ್ರಚಾರಕ, ಜಾಗತಿಕ ಶಾಂತಿ ಉಪಕ್ರಮ ಪ್ರಚಾರಕ ಆಂಧ್ರದ ಕೆ.ಎ.ಪೌಲ್‌ ಅವರು ಭೇಟಿಯನ್ನು ಏರ್ಪಡಿಸಿದ್ದಾರೆ. ಅಲ್ಲದೆ ನಿಮಿಷಾಳನ್ನು ಬಿಡುಗಡೆ ಮಾಡುವಂತೆ ಹೌತಿಗಳಿಗೆ ವಿಡಿಯೋ ಸಂದೇಶವೊಂದನ್ನೂ ಅಪ್ಪ-ಮಗಳು ಕಳುಹಿಸಿದ್ದಾರೆ.

ಮಿಶೆಲ್, “ಅಮ್ಮ…ನಾನು ನಿನ್ನನ್ನು ಪ್ರೀತಿಸುತ್ತೇನೆ. ದಯವಿಟ್ಟು ನನ್ನ ತಾಯಿಯನ್ನು ಮನೆಗೆ ಕರೆತರಲು ಸಹಾಯ ಮಾಡಿ. ನಾನು ಅವರನ್ನು ನೋಡಲು ತುಂಬಾ ಬಯಸುತ್ತೇನೆ. ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ ಅಮ್ಮ.”ಎಂದು ಮಲಯಾಳಂ ಮತ್ತು ಇಂಗ್ಲಿಷ್ ಎರಡರಲ್ಲೂ ಮಾಡಿದ ಭಾವನಾತ್ಮಕ ವಿಡಿಯೋ ಬಹಿರಂಗವಾಗಿದೆ.

ನಿಮಿಷಾಳ ಪತಿ ಟಾಮಿ ಥಾಮಸ್ “ದಯವಿಟ್ಟು ನನ್ನ ಹೆಂಡತಿ ನಿಮಿಷಾ ಪ್ರಿಯಾಳನ್ನು ಉಳಿಸಿ ಮತ್ತು ಅವಳು ತನ್ನ ಊರು ತಲುಪಲು ಸಹಾಯ ಮಾಡಿ” ಎಂದು ಮನವಿ ಮಾಡಿದ್ದಾರೆ.

ಮಾತುಕತೆಯಲ್ಲಿ ಭಾಗಿಯಾಗಿದ್ದಾರೆಂದು ವರದಿಯಾದ ಯೆಮೆನ್ ಅಧಿಕಾರಿಗಳು ಮತ್ತು ತಲಾಲ್ ಕುಟುಂಬಕ್ಕೆ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ “ನಿಮಿಷಾ ಅವರ ಏಕೈಕ ಮಗಳು 10 ವರ್ಷಗಳಿಂದ ಅವರನ್ನು ನೋಡಲಿಲ್ಲ. ಮಿಶೆಲ್ ಇಲ್ಲಿದ್ದಾರೆ. ನಾನು ತಲಾಲ್ ಕುಟುಂಬಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಥಾಮಸ್ ಹೇಳಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement