Published
7 months agoon
By
Akkare News
ಇತ್ತೀಚೆಗೆ ನಮ್ಮನ್ನಗಲಿದ ತುಳು ಪರಿಷತ್ ಸದಸ್ಯರು, ಸಣ್ಣ ವಯಸ್ಸಿನಲ್ಲೇ ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ಸಾಧನೆ ಮಾಡಿ ಅಪಾರ ಜನರ ಪ್ರೀತಿ ಪಾತ್ರರಾಗಿದ್ದ ಕವಯಿತ್ರಿ, ಬರಹಗಾರ್ತಿ, ಲೇಖಕಿ, ಯುವ ಸಾಹಿತಿ, ವಾಗ್ಮಿ, ನಿರೂಪಕಿ, ಕಥಾ ವಾಚಕಿ, ಹಿನ್ನೆಲೆ ಧ್ವನಿ ಕಲಾವಿದೆ,ಯೋಗ ಪಟು, ರಂಗಭೂಮಿ ಕಲಾವಿದೆ, ಪುಸ್ತಕ ಪ್ರೇಮಿ ಹೀಗೆ ಹತ್ತು ಹಲವು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ವೃತ್ತಿಯಲ್ಲಿ ವಕೀಲೆಯಾಗಿದ್ದು ಅಸೌಖ್ಯದಿಂದ ಇತ್ತೀಚೆಗೆ ಅಕಾಲಿಕವಾಗಿ ನಮ್ಮನ್ನಗಲಿದ ರಾಜಶ್ರೀ ಜಯರಾಜ್ ಪೂಜಾರಿ ಅವರಿಗೆ ತುಳು ಪರಿಷತ್ ವತಿಯಿಂದ ನುಡಿನಮನ ಕಾರ್ಯಕ್ರಮ ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಪರಿಷತ್ ಅಧ್ಯಕ್ಷರಾದ ಸುಬೋಧ್ ಆಳ್ವಾ, ತುಳು ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ, ಪರಿಷತ್ ಪ್ರಮುಖರಾದ ಪ್ರಭಾಕರ್ ನೀರ್ ಮಾರ್ಗ, ಪ್ರಧಾನ ಕಾರ್ಯದರ್ಶಿ ಬೆನೆಟ್ಟ್ ಅಮ್ಮನ್ನ , ಮೀನಾಕ್ಷಿ ರಾಮಚಂದ್ರ, ಶೋಭಾ ಶೆಟ್ಟಿ ಶಕ್ತಿನಗರ, ರಾಕೇಶ್ ಕುಂದರ್, ರಮೇಶ್ ಮಂಚಕಲ್, ಅಮಿತಾ ಅಶ್ವಿನ್ ಉಳ್ಳಾಲ್ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು.



ಕಾರ್ಯಕ್ರಮದಲ್ಲಿ ಪರಿಷತ್ ಸಂಘಟನಾ ಕಾರ್ಯದರ್ಶಿ ಉಮ್ಮರ್ ಸಾಲೆತ್ತೂರು, ಪದಾಧಿಕಾರಿಗಳಾದ ವಿನುತಾ KN , ಬಿ ಶ್ರೀನಿವಾಸ್ ,ಸುಮತಿ ಹೆಗ್ಡೆ ,ದುರ್ಗಾ ಪ್ರಸಾದ್, ನ್ಯಾನ್ಸಿ ನೊರೊನ್ಸಾ , ಕೀರ್ತಿ ಸಹಿತ ಹಲವರು ಉಪಸ್ಥಿತರಿದ್ದರು.













