Published
7 months agoon
By
Akkare News
ಧರ್ಮಸ್ಥಳ : 11ನೇ ಸ್ಥಳದಲ್ಲಿ ಕಳೇಬರ ಶೋಧಕ್ಕಾಗಿ ನಡೆಯಬೇಕಿದ್ದ ಅಗೆತ ಕಾರ್ಯವನ್ನು ಎಸ್.ಐ.ಟಿ. ತಂಡ ಕೈಬಿಟ್ಟು, ಅನಾಮಿಕ ವ್ಯಕ್ತಿ ಗುರುತಿಸಿದ ಕಾಡಿನ ಮೇಲ್ಭಾಗದ ಬಂಗ್ಲಗುಡ್ಡದಲ್ಲಿ ಉತ್ಖನನ ನಡೆಸುತ್ತಿದ್ದು, ಕಾಡಿನಲ್ಲಿ ಅಸ್ಥಿಪಂಜರದ ಹಲವಾರು ಭಾಗಗಳು ಲಭ್ಯವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಟಿವಿ ವಾಹಿನಿ ನ್ಯೂಸ್ 18 ಕೂಡ ಅಸ್ತಿ ಪಂಜರ ಸಿಕ್ಕಿರುವ ಬಗ್ಗೆ ವರದಿ ಮಾಡಿದೆ.



ಧರ್ಮಸ್ಥಳದನೇತ್ರಾವತಿಸ್ನಾನಘಟ್ಟದಸುತ್ತಮುತ್ತ ಅನಾಮಿಕವ್ಯಕ್ತಿ ಸದ್ಯ 13 ಜಾಗಗಳನ್ನು ಗುರುತಿಸಿದ್ದ. ಈಪೈಕಿ11 ನೇ ಸ್ಥಳದಲ್ಲಿ ಉತ್ಖನನ ಕಾರ್ಯ ಇಂದು ನಡೆಯಬೇಕಿತ್ತು. ಆದರೆ ಈ ವೇಳೆ ದೂರುದಾರ ಗುಡ್ಡದ ಮೇಲ್ಭಾಗಕ್ಕೆ ಕರೆದೊಯ್ದಿದ್ದು, ಅಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಈ ವೇಳೆ ಅಲ್ಲಿ ಕೆಲವು ಮೂಳೆಗಳು ಸಿಕ್ಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ ಅನಾಮಿಕ ತೋರಿಸಿದ ಜಾಗದಲ್ಲಿ ಉತ್ಖನನ ಮುಂದುವರೆದಿದೆ.
ಈವರೆಗಿನ ತನಿಖೆಯಲ್ಲಿ ಗುಂಡಿ 6ರಲ್ಲಿ 25 ಮೂಳೆಗಳು ಸಿಕ್ಕಿದ್ದು, ಇವು ಪುರುಷನ ಅಸ್ಥಿಪಂಜರದ ಭಾಗಗಳೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಈ ಮೂಳೆಗಳನ್ನು ಫಾರೆನ್ಸಿಕ್ ತಪಾಸಣೆಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಆದರೆ, ಉಳಿದ ಸ್ಥಳಗಳಲ್ಲಿ ಯಾವುದೇ ಕುರುಹುಗಳು ಸಿಕ್ಕಿಲ್ಲ, ಇದರಿಂದ ಎಸ್‌ಐಟಿಯ ತನಿಖೆಗೆ ಸವಾಲು ಎದುರಾಗಿತ್ತು. ಇದೀಗ ಮತ್ತೆ ಕಳೇಬರ ಸಿಕ್ಕಿರುವುದು ಮತ್ತೊಂದು ಕುತೂಹಲದತ್ತ ದಾರಿ ಮಾಡಿಕೊಟ್ಟಿದೆ.



ಬಂಗ್ಲಗುಡ್ಡದ ದಟ್ಟಕಾಡಿನಲ್ಲಿ ಊಟದ ಬ್ರೇಕ್ ಕೂಡ ಕೊಡದೆ ಉತ್ಖನನ ಕಾರ್ಯ ನಡೆಯುತ್ತಿದ್ದು, ಕೆಲವು ಮೂಳೆಗಳು ಹಾಗೂ ಸೀರೆಯ ಭಾಗ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅನಾಮಿಕ ತೋರಿಸಿದ ಜಾಗದಲ್ಲಿ ಉತ್ಖನನ ಕಾರ್ಯ ಮುಂದುವರಿದಿದೆ. ಇದೀಗ ಸ್ಥಳಕ್ಕೆ ಕಾರ್ಮಿಕರು ಎರಡು ಮೂಟೆ ಉಪ್ಪು ಸಾಗಿಸುತ್ತಿದ್ದಾರೆ.








