Connect with us

ಸ್ಥಳೀಯ

ಶ್ರೀಮತಿ ಶಕುಂತಲಾ ಶೆಟ್ಟಿ ಗೌರವಾಧ್ಯಕ್ಷತೆಯ, ನಟರಾಜ ವೇದಿಕೆಯಲ್ಲಿ ನಡೆಯುವ ವರಮಹಾಲಕ್ಷ್ಮಿ ಪೂಜೆಗೆ ಮಹಾಲಿಂಗೇಶ್ವರ ದೇವಸ್ಥಾನ ಸಮಿತಿಯಿಂದ ಅನ್ನದಾನ ನಿರಾಕರಣೆ

Published

on

ಪುತ್ತೂರು : ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ನೇತೃತ್ವದ ಸಮರ್ಪಣ ಮಹಿಳಾ ಸೇವಾ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಯ ನೇತೃತ್ವದಲ್ಲಿ ವರ್ಷಂಪ್ರತಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆಯುವ ವರಮಹಾಲಕ್ಷ್ಮೀ ಪೂಜೆಗೆ ಮಹಾಲಿಂಗೇಶ್ವರ ದೇವಾಲಯದಿಂದ ನೀಡಲಾಗುತ್ತಿದ್ದ ಅನ್ನಪ್ರಸಾದವನ್ನು ಈ ಬಾರಿ ನೀಡುತ್ತಿಲ್ಲ ಎನ್ನುವ ವಿಚಾರವೀಗ ಚರ್ಚೆಗೆ ಈಡಾಗಿದೆ.

ಕಳೆದ 17 ವರ್ಷಗಳಿಂದ ಇಲ್ಲಿ ವರ ಮಹಾಲಕ್ಷ್ಮೀ ಪೂಜೆ ನಡೆಯುತ್ತಿದ್ದು ಹಲವು ವರ್ಷಗಳಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವತಿಯಿಂದ ಮಧ್ಯಾಹ್ನದ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ಬಾರಿಯು ಆ.8 ರಂದು ಪೂಜೆ ನಿಗದಿ ಆಗಿದ್ದು ಆದರೆ ದೇವಾಲಯದ ವತಿಯಿಂದ ಅನ್ನದಾನ ನೀಡಲಾಗುತ್ತಿಲ್ಲ ಎನ್ನುವ ಮಾಹಿತಿ ದೊರತಿದೆ. ಈ ಮಧ್ಯೆ ಕೃಷ್ಣಲೋಕ ಕಾರ್ಯಕ್ರಮ, ಬಜರಂಗದಳದ ಕಾರ್ಯಕ್ರಮ ಸಹಿತ ವಿವಿಧ ಕಾರ್ಯಕ್ರಮಗಳಿಗೆ ದೇವಾಲಯದ ವತಿಯಿಂದ ಅನ್ನದಾನ ನೀಡಲು ನಿರ್ಧರಿಸಲಾಗಿದ್ದು ಆದರೆ ವರ ಮಹಾಲಕ್ಷ್ಮೀ ಪೂಜೆಗೆ ಮಾತ್ರ ನಿರಾಕರಿಸಿರುವ ಬಗ್ಗೆ ಪ್ರಶ್ನೆ ಮೂಡಿದೆ.

ದೇವಸ್ಥಾನದ ಅನ್ನದಾನ ಸಿಗದೆ ಬೇರೆ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement