Connect with us

ಇಂದಿನ ಕಾರ್ಯಕ್ರಮ

ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ವತಿಯಿಂದ ಆಟಿದ ಕೂಟ ಕಾರ್ಯಕ್ರಮ

Published

on

ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವತಿಯಿಂದ ಆಟಿ ದ ಕೂಟ ಕಾರ್ಯಕ್ರಮ ನಿನ್ನೆ ನಡೆಯಿತು.ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಮೈತ್ರಿಯಿ ಗುರುಕುಲದ ವ್ಯವಸ್ಥಾಪಕರು ಹಿರಿಯರು ಆದ ಶ್ರೀ ಜಗನ್ನಾಥ ಕಾಸರಗೋಡು, Vtv ವಿಟ್ಲ ಇದರ ಆಡಳಿತ ನಿರ್ದೇಶಕರಾದ ರಾಮದಾಸ್ ಶೆಟ್ಟಿ ಹಾಗೂ Ln. ಸಂತೋಷ ಕುಮಾರ್ ಶೆಟ್ಟಿ, ಪೆಲತ್ತಡ್ಕ ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಜಗನ್ನಾಥ ಕಾಸರಗೋಡುರವರು ಸಂಘದ ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯತೆ ಈ ಕಾರ್ಯಕ್ರಮ ನಡೆಯುತ್ತಿದ್ದು ಈ ಸಂಘದಿಂದ ಇನ್ನೂ ಹೆಚ್ಚಿನ ರಾಷ್ಟ್ರೀಯ ಚಿಂತನೆಯ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ನ ಗೌರವಾಧ್ಯಕ್ಷರಾದ ಅರುಣ್ ವಿಟ್ಲ ಅಧ್ಯಕ್ಷರಾದ ತಾರಾನಾಥ ವಿಟ್ಲ ಹಾಗೂ ಕಾರ್ಯದರ್ಶಿ ಶರತ್, ರಮೇಶ ವರಪ್ಪಾದೆ, ಜಯಪ್ರಕಾಶ ವರಪ್ಪಾದೆ, ಗಂಗಾಧರ ವಿಟ್ಲ,ಜತ್ತಪ್ಪ ವಿಟ್ಲ, ರಾಮದಾಸ ಶೆಣೈ ವಿಟ್ಲ, ನಾಗೇಶ ಬಸವನಗುಡಿ ಮತ್ತು ಸ್ವಸ್ತಿಕ್ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿರಿದ್ದರು.

ಸಭಾ ಕಾರ್ಯಕ್ರಮದ ನಂತರ ಸಂಘದ ಎಲ್ಲಾ ಸದಸ್ಯರು ತಮ್ಮ ತಮ್ಮ ಮನೆಯಲ್ಲಿ ತಯಾರಿಸಿ ತಂದ ಸುಮಾರು 35 ಕ್ಕೂ ಹೆಚ್ಚು ತುಳುನಾಡಿನ ವಿಶಿಷ್ಟ ಖಾದ್ಯಗಳೊಂದಿಗೆ ಸಹ ಭೋಜನ ಕಾರ್ಯಕ್ರಮ ನಡೆಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement