Published
6 months agoon
By
Akkare News
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೂರ್ಗ್ ಮೂಲದ ಉದ್ಯಮಿ ರೋಷನ್ ಎಂಬುವರನ್ನ ಅನುಶ್ರೀ ವಿವಾಹವಾಗಿದ್ದಾರೆ. ಬೆಂಗಳೂರು ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಅನುಶ್ರೀ-ರೋಷನ್ ವಿವಾಹ ನಡೆದಿದೆ. ಮದುವೆಗೆ ಯಾರೆಲ್ಲಾ ಬಂದಿದ್ರು ನೋಡಿ..



ಕನ್ನಡ ಸ್ಟಾರ್ ನಿರೂಪಕಿ ಅನುಶ್ರೀ ಅವರ ವಿವಾಹ ಇಂದು (ಆಗಸ್ಟ್ 28) ಸಖತ್ ಗ್ರ್ಯಾಂಡ್ ಆಗಿ ನೆರವೇರಿದೆ. ಕೊಡಗು ಮೂಲದ ರೋಷನ್ ಎಂಬುವವರನ್ನ ಅನುಶ್ರೀ ಮದುವೆಯಾಗಿದ್ದಾರೆ. ಇವರದ್ದು ಲವ್ ಕಂ ಅರೇಂಜ್ಡ್ ಮ್ಯಾರೇಜ್. ಹೌದು.. ಹಲವು ವರ್ಷಗಳ ಪ್ರೀತಿಗೆ ಈ ಜೋಡಿ ಮದುವೆ ಮುದ್ರೆಯನ್ನು ಒತ್ತಿದ್ದಾರೆ. ಇಂದು ಬೆಳಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ ಕೊರಳಿಗೆ ರೋಷನ್ ಮಾಂಗಲ್ಯಧಾರಣೆ ಮಾಡಿದ್ದಾರೆ.
ಅನುಶ್ರೀ ಅವರ ಮದುವೆ ಬಗ್ಗೆ ಅವರಿಗಿಂತಲೂ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿತ್ತು. ಯಾವಾಗ ಮದುವೆ ಆಗುತ್ತಾರೆ ಅನ್ನೋ ಪ್ರಶ್ನೆ ಅವರ ಅಭಿಮಾನಿಗಳಲ್ಲಿತ್ತು. ಅಂತೂ ಈ ಪ್ರಶ್ನೆಗೆ ಫುಲ್ ಸ್ಟಾಪ್ ಬಿದ್ದಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅನುಶ್ರೀ-ರೋಷನ್ ಅವರ ವಿವಾಹ ಮಹೋತ್ಸವ ಜರುಗಿದೆ.













