Connect with us

ಇತರ

ವಿಠಲ ಪದವಿಪೂರ್ವ ಕಾಲೇಜ್ ನಲ್ಲಿ ವಿಟ್ಲ ತಾಲೂಕಿನ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಸಮಾರೋಪ ಸಮಾರಂಭ

Published

on

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವಿಟ್ಲ, ಜನಜಾಗ್ರತಿ ವೇದಿಕೆ ವಿಟ್ಲ, ವತಿಯಿಂದ ತಾಲೂಕಿನ 15 ಶಾಲಾ ಕಾಲೇಜುಗಳಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಸಿ, ಸಮಾರೋಪ ಕಾರ್ಯಕ್ರಮವನ್ನು ಪ್ರಗತಿಬಂದು ಸ್ವಸಹಾಯ ಸಂಘಗಳ ಒಕ್ಕೂಟ ವಿಟ್ಲ ವಲಯದ ಸಹಯೋಗದಲ್ಲಿ ವಿಠಲ ಪದವಿಪೂರ್ವ ಕಾಲೇಜ್ ವಿಟ್ಲ ಇಲ್ಲಿ ಮಂಗಳವಾರ ನಡೆಸಲಾಯಿತು .

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಅತೀ ಹೆಚ್ಚು ವ್ಯಸನಗಳಿಗೆ ಬಲಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತ ಪಡಿಸಿ. ಇದಕ್ಕೆ ಕಾರಣಗಳು ಬಗ್ಗೆ ವಿವರಣೆ ನೀಡಿದರು. ವ್ಯಸನಗಳಿಂದ ದೂರವಿರಲು ಬೇಕಾದ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಮುಳಿಯ ತಿರುಮಲೇಶ್ವರ ಭಟ್ ವಹಿಸಿದ್ದರು.

ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಜನಜಾಗೃತಿ ಮಾಜಿ ಅಧ್ಯಕ್ಷರುಗಳದ ಕೈಯೂರ್ ನಾರಾಯಣ ಭಟ್, ಬಾಲಕೃಷ್ಣ ಆಳ್ವ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಸುರೇಶ ಗೌಡ, ಕಾಲೇಜು ಪ್ರಭಾರ ಪ್ರಾಂಶುಪಾಲರಾದ ಅಣ್ಣಪ್ಪ ಶಾಸ್ತರ, ಶ್ರೀಮತಿ ರೇಣುಕಾ ಕಣಿಯೂರ್ ಉಪಸ್ಥಿತರಿದ್ದರು.

ಉಪನ್ಯಾಸಕ ಅಣ್ಣಪ್ಪ ಸರ್ ಸ್ವಾಗತಿಸಿ, ಉಪನ್ಯಾಸಕಿ ಶ್ರೀಮತಿ ಸವಿತ ವಂದಿಸಿ, ವಿಟ್ಲ ವಲಯ ಮೇಲ್ವಿಚಾರಕ ಜಗದೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವಲಯದ ಸೇವಾಪ್ರತಿನಿಧಿ ಮತ್ತು ವಿಪತ್ತು ಸದಸ್ಯರು ಸಹಕರಿಸಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement