Published
6 months agoon
By
Akkare News


ನಕಲಿ ವೈದ್ಯರ ಹಾವಳಿ ಬಗ್ಗೆ ಧ್ವನಿ ಎತ್ತಿದ್ದ ಎಂಎಲ್ಸಿ ಶರಣಗೌಡ ಬಯ್ಯಾಪುರ
ಇದೇ ನಕಲಿ ವೈದ್ಯರು, ಆರ್ಎಂಪಿ ವೈದ್ಯರ ವಿರುದ್ಧ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಎಂಎಲ್ಸಿ ಶರಣಗೌಡ ಬಯ್ಯಾಪುರ ಆಕ್ರೋಶ ಹೊರಹಾಕಿದ್ದರು. ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಆರ್ಎಂಪಿಗಳು, ಅವರ ಕೈಯಲ್ಲಿ ಕೆಲಸ ಮಾಡಿರುವವರೇ ಜಿಲ್ಲೆಯಲ್ಲಿ ಖ್ಯಾತ ವೈದ್ಯರು ಅಂತ ಅವರು ಕಿಡಿಕಾರಿದ್ದರು.

ಅಷ್ಟೇ ಅಲ್ಲ ಚಿಕಿತ್ಸೆ ಆರಂಭದಲ್ಲೇ ಆರ್ಎಂಪಿ ನಕಲಿ ವೈದ್ಯರು ಹೈಡೋಸ್ ಚಿಕಿತ್ಸೆ ಕೊಡುತ್ತಾರೆ. ಹೀಗಾಗಿ ನಕಲಿ ವೈದ್ಯರ ಬಳಿ ಬರುವವರು ಅತೀ ಕಡಿಮೆ ಅವಧಿಯಲ್ಲೇ ಗುಣ ಮುಖರಾಗುತ್ತಾರೆ. ಆದರೆ ಅವರ ದೀರ್ಘಕಾಲದ ಸ್ಥಿತಿಗತಿಯನ್ನ ಆರ್ಎಂಪಿ ವೈದ್ಯರು ತಲೆಕಡೆಸಿಕೊಳ್ಳಲ್ಲ. ಅಸಲಿ ವೈದ್ಯರು ಹಂತಹಂತವಾಗಿ ಚಿಕಿತ್ಸೆ ನೀಡುತ್ತಾರೆ. ಹೀಗಾಗಿ ಜನರು ಹೈಡೋಸ್ ಕೊಡುವ ನಕಲಿ ವೈದ್ಯರ ಬಳಿಯೇ ಹೋಗುತ್ತಾರೆ ಅಂತ ಎಂಎಲ್ಸಿ ಶರಣೇಗೌಡ ಬಯ್ಯಾಪುರ ಕಿಡಿಕಾರಿದ್ದರು.
ಇತ್ತ ಇದೇ ವಿಷಯ ಜಿಲ್ಲೆಯಾದ್ಯಂತ ಬಾರಿ ಸದ್ದು ಮಾಡಿತ್ತು. ಇದಾದ ಬಳಿಕ ಜಿಲ್ಲೆಯಲ್ಲಿ ಆಕ್ಟಿವ್ ಆಗಿರುವ ನಕಲಿ ವೈದ್ಯರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದೇ ಕಾರಣಕ್ಕೆ ಜಿಲ್ಲಾಧಿಕಾರಿ ನಿತೀಶ್.ಕೆ ಅವರ ಆದೇಶದನ್ವಯ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ನಕಲಿ ವೈದ್ಯರ ವಿರುದ್ಧ ಬಿಗ್ ಆಪರೇಶನ್ ಮಾಡಿ ಮುಗಿಸಿದೆ.

120ಕ್ಕೂ ಹೆಚ್ಚು ನಕಲಿ ವೈದ್ಯರ ಪತ್ತೆ, ಕ್ಲಿನಿಕ್ ಸೀಜ್
ರಾಯಚೂರು ನಗರ ಸೇರಿ ಜಿಲ್ಲೆಯಾದ್ಯಂತ ಒಟ್ಟು 120ಕ್ಕೂ ಹೆಚ್ಚು ನಕಲಿ ವೈದ್ಯರ ಪಟ್ಟಿಯನ್ನ ಆರೋಗ್ಯ ಇಲಾಖೆ ಸಿದ್ಧಪಡಿಸಿತ್ತು. ಅದರ ಆಧಾರದಲ್ಲಿ ಎಲ್ಲಾ 120 ನಕಲಿ ವೈದ್ಯರಿಗೆ ಬಿಗ್ ಶಾಕ್ ಕೊಟ್ಟಿದೆ. ಸದ್ಯ 120 ನಕಲಿ ಕ್ಲಿನಿಕ್ಗಳನ್ನ ಸೀಜ್ ಮಾಡಿ ಆರೋಗ್ಯ ಇಲಾಖೆ ಕ್ಲೋಸ್ ಮಾಡಿದೆ.

ಕೆಪಿಎಂಇ ರಿಜಿಸ್ಟ್ರೇಷನ್ ಇಲ್ಲದೇ ಇರುವ, ಅಲೋಪತಿ ಚಿಕಿತ್ಸೆ ನೀಡುತ್ತಿರುವ, ಆಯುಷ್ ವೈದ್ಯರಿಗೂ ಶಾಕ್ ನೀಡಲಾಗಿದೆ. ಈ ರೀತಿ ನಿಯಮ ಉಲ್ಲಂಘಿಸಿದ್ದ 17 ಜನರಿಗೆ 25 ರಿಂದ 50 ಸಾವಿರ ರೂ. ದಂಡ ವಿಧಿಸಲಾಗಿದೆ. ನಕಲಿ ವೈದ್ಯರಿಗೆ ಕಾನೂನು ಕ್ರಮ ಜರುಗಿಸುವುದಾಗಿ ಆರೋಗ್ಯ ಇಲಾಖೆ ಡಿಎಚ್ಓ ಡಾ.ಸುರೇಂದ್ರಬಾಬು ಹೇಳಿದ್ದಾರೆ.ಬೆಂಗಳೂರಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ನಕಲಿ ವೈದ್ಯರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಪ್ಲ್ಯಾನ್ ಇದು
ಸದ್ಯ ಇಂತಹ ನಕಲಿ ವೈದ್ಯರ ಬಗ್ಗೆ ಎಚ್ಚರವಹಿಸಬೇಕಿದೆ.









