Published
6 months agoon
By
Akkare News
ದಾವಣಗೆರೆ: ಭ್ರಷ್ಟಾಚಾರ ಆರೋಪ ಮಾಡಿದವರ ಸವಾಲನ್ನು ಒಪ್ಪಿ ಆಣೆ ಪ್ರಮಾಣಕ್ಕಾಗಿ ಹೊನ್ನಾಳಿ ಶಾಸಕ ಡಿ.ಜಿ ಶಾಂತನಗೌಡ ಅವರು ಕುಂದೂರು ಆಂಜನೇಯ ದೇವಾಲಯಕ್ಕೆ ಆಗಮಿಸಿದ್ದರು. ದೇವಾಲಯದಲ್ಲಿ ಸುಮಾರು 2 ಗಂಟೆ ಅವರು ಕಾದಿದ್ದರು.


ಗುತ್ತಿಗೆದಾರರಿಂದ ಹಣ ಪಡೆದಿದ್ದಾರೆ ಎಂದು ಅವರ ವಿರುದ್ಧ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರ ಆಪ್ತ ಕೊಳೇನಹಳ್ಳಿ ಸತೀಶ್ ಆರೋಪಿಸಿದ್ದರು. ಇದೇ ವಿಚಾರವಾಗಿ ಸವಾಲು ಹಾಕಿ ಕುಂದೂರು ಆಂಜನೇಯ ದೇವಸ್ಥಾನಕ್ಕೆ ಆಣೆ ಪ್ರಮಾಣಕ್ಕೆ ಆಹ್ವಾನಿಸಿದ್ದರು. ಈ ಸವಾಲನ್ನು ಒಪ್ಪಿದ್ದ ಶಾಸಕರು ದೇವಾಲಯಕ್ಕೆ ಬಂದು ಕಾದಿದ್ದಾರೆ. ಆದರೆ ಸವಾಲೆಸೆದ ಮುಖಂಡರು ದೇವಾಲಯಲಯಕ್ಕೆ ಬರಲಿಲ್ಲ.


