Connect with us

ಸ್ಥಳೀಯ

ಇನ್ನು ಮುಂದೆ ವಿದ್ಯುತ್ ಸಂಪರ್ಕಕ್ಕಾಗಿ ಒಸಿ ಅಗತ್ಯ ಇಲ್ಲ: ನಿಯಮ ತಿದ್ದುಪಡಿ ಮಾಡಿದ ಕೆಇಆರ್​ಸಿ!

Published

on

ಬೆಂಗಳೂರು: ಇನ್ನು ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿದಾರರು ಸ್ವಾಧೀನ ಪತ್ರ ನೀಡುವ ಅಗತ್ಯ ಇಲ್ಲ. ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ನಿಯಮಕ್ಕೆ ತಿದ್ದುಪಡಿ ತಂದಿದ್ದು, ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಆ ಮೂಲಕ ರಾಜ್ಯದ ಜನರಿಗೆ ಗುಡ್ ನ್ಯೂಸ್ ನೀಡಿದೆ.


ವಿದ್ಯುತ್ ಸಂಪರ್ಕಕ್ಕಾಗಿ ಸ್ವಾಧೀನ ಪತ್ರ (OC) ನೀಡುವ ನಿಯಮವನ್ನು ರದ್ದುಗೊಳಿಸುವಂತೆ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳಿಂದ ಸಾಕಷ್ಟು ಒತ್ತಾಯ ಇತ್ತು. ಇದೀಗ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಈ ಸಂಬಂಧ ನಿಯಮಗಳಿಗೆ ತಿದ್ದುಪಡಿ ತಂದ್ದಿದ್ದು, ವಿದ್ಯುತ್ ಸಂಪರ್ಕಕ್ಕಾಗಿ ಸ್ವಾಧೀನ‌ಪತ್ರ ನೀಡುವ ಅಂಶವನ್ನು ರದ್ದುಗೊಳಿಸಿದೆ. ಇದೀಗ ಸ್ವಾಧೀನ ಪತ್ರ ಹೊಂದಿಲ್ಲದವರೂ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ.

ಈ ಮುಂಚಿನ ನಿಯಮದಂತೆ ವಿದ್ಯುತ್ ಸಂಪರ್ಕ ಬೇಕಾದವರು ಎಸ್ಕಾಂಗಳಿಗೆ ಗುರುತು ಪ್ರಮಾಣಪತ್ರ, ಮಾಲಿಕತ್ವದ ಪ್ರಮಾಣಪತ್ರ ಹಾಗೂ ಸ್ವಾಧೀನ ಪತ್ರವನ್ನು ನೀಡಬೇಕಾಗಿತ್ತು. ಇದೀಗ ನಿಯಮಕ್ಕೆ ತಿದ್ದುಪಡಿ ತಂದ ಹಿನ್ನೆಲೆ ಇನ್ಮುಂದೆ ಅರ್ಜಿದಾರರು ಗುರುತು ಪ್ರಮಾಣಪತ್ರ, ಮನೆ ಮಾಲೀಕತ್ವದ ಪ್ರಮಾಣ ಪತ್ರ ಸಲ್ಲಿಸಿದರೆ ಸಾಕು.
ಈ ತಿದ್ದುಪಡಿ ನಿಯಮ ಗೃಹ ಹಾಗೂ ವಾಣಿಜ್ಯ ಕಟ್ಟಡದ ಅರ್ಜಿದಾರಿಗೂ ಅನ್ವಯವಾಗಲಿದೆ. ಒಸಿ ನೀಡುವ ನಿಯಮವನ್ನು ರದ್ದುಗೊಳಿಸಲು ಕೋರಿ ಎಸ್ಕಾಂಗಳು ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಇತ್ತ ಸರ್ಕಾರವೂ ಒಸಿ ನಿಯಮ ತೆರವು ಮಾಡುವಂತೆ ಕೋರಿತ್ತು. ಈ ಸಂಬಂಧ ಕೆಇಆರ್​ಸಿ ಸಾರ್ವಜನಿಕ ಅಹವಾಲು ನಡೆಸಿದ ಬಳಿಕ ಇದೀಗ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಗುಡ್ ನ್ಯೂಸ್ ‌ನೀಡಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement