Published
6 months agoon
By
Akkare News
ಪುತ್ತೂರು: ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿದ ಪಾಣಾಜೆ ಗ್ರಾಮದ ವಿಶ್ವನಾಥ ರೈ ಅಂಗಡಿಮಜಲು ಅವರಿಗೆ ಗ್ರಾಮಕರಣಿಕನು ಅರ್ಜಿ ಮಾನ್ಯ ಮಾಡಲು ನಿರಾಕರಿಸಿರುವುದರಿಂದ ವ್ಯಕ್ತಿಯೊಬ್ಬರು ಸೋಮವಾರ ಶಾಸಕ ಅಶೋಕ್ ರೈ ಅವರಿಗೆ ದೂರು ನೀಡಿದರು.

ವಿಶ್ವನಾಥ ರೈ ಬಿಪಿಎಲ್ ಪಡಿತರ ಚೀಟಿದಾರರಾಗಿದ್ದು, ಅಲ್ಪಕೃಷಿ ತೋಟವಿರುವ ನೆಪದಲ್ಲಿ ಗ್ರಾಮಕರಣಿಕರು ಇವರ ಅರ್ಜಿಯನ್ನು ತಿರಸ್ಕರಿಸಿದ್ದರು. “ಕೆಲವು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ವೇತನ ಸಿಗುತ್ತಿಲ್ಲ” ಎಂದು ಅಹವಾಲು ನೀಡಿದರು.

ಈ ಹಿನ್ನೆಲೆಯಲ್ಲಿ ಗ್ರಾಮಕರಣಿಕರಿಗೆ ಶಾಸಕ ಅಶೋಕ್ ರೈ ದೂರವಾಣಿ ಕರೆ ಮಾಡಿ ಎಚ್ಚರಿಕೆ ನೀಡಿದರು. “ಏನೋ ನಾಲ್ಕು ಅಡಿಕೆ ಮರ ಇದೆ ಎಂಬ ಕಾರಣಕ್ಕೆ ಅರ್ಜಿದಾರರನ್ನು ಶ್ರೀಮಂತರು ಎಂದು ಪರಿಗಣಿಸುವುದೇನು? ಇವರಿಗೆ ಗಂಡು ಮಕ್ಕಳೂ ಇಲ್ಲ. ಪಿಂಚಣಿ ನೀಡುವುದು ಸರಕಾರದ ಕೆಲಸ, ನಿಮ್ಮ ಕೈಯಿಂದ ಕೊಡುವುದಲ್ಲ. ಸರಕಾರದ ಸೌಲಭ್ಯ ನೀಡುವುದರಲ್ಲಿ ಅಡಚಣೆ ಮಾಡಬೇಡಿ” ಎಂದು ಎಚ್ಚರಿಸಿದರು.


