Connect with us

ಸ್ಥಳೀಯ

ಶಾಸಕ ಅಶೋಕ್ ರೈ ಸೂಚನೆ ಪಿಎಬ್ಲ್ಯುಡಿ ರಸ್ತೆ ಹೊಂಡ ಮುಚ್ಚುವ ಕಾಮಗಾರಿಗೆ ಚಾಲನೆ

Published

on

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಡಬ್ಲ್ಯುಡಿ ರಸ್ತೆಯ ತೇಪೆ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಗಿದೆ.


ಮಳೆಯ ಕಾರಣಕ್ಕೆ ಕೆಲವು ಕಡೆಗಳಲ್ಲಿ ರಸ್ತೆ ಹೊಂಡಬಿದ್ದಿದ್ದು ಅವುಗಳಿಗೆ ವೆಟ್‌ಮಿಕ್ಸ್ ಹಾಕುವ ಮೂಲಕ ಹೊಂಡ ಮುಚ್ಚುವ ಕೆಲಸಕ್ಕೆ ಚಾಲನೆ ನೀಡಲಾಯಿತು.
ಕ್ಷೇತ್ರ ವ್ಯಾಪ್ತಿಯ ಸುಮಾರು 200 ಕಿ ಮೀ ಪಿಡಬ್ಲ್ಯುಡಿ ರಸ್ತೆಗಳಲ್ಲಿ ಹೊಂಡ ಮುಚ್ಚುವ ಕಾಮಗಾರಿ ನಡೆಯಲಿದೆ.‌ ಕಾಮಗಾರಿಗೆ ಕಿ ಮೀ ಒಂದಕ್ಕೆ ಒಂದು ಲಕ್ಷದಂತೆ ಅನುದಾನ ಬಿಡುಗಡೆಯಾಗಿದೆ. ವಾರದೊಳಗೆ ಎಲ್ಲಾ ಕಡೆಗಳಲ್ಲಿ ತೇಪೆ ಹಾಗೂ ಹೊಂಡ ಮುಚ್ಚುವ ಕಾಮಗಾರಿ ನಡೆಯಲಿದೆ.
ಸೋಮವಾರ ಪಿಡಬ್ಲ್ಯುಡಿ ಇಂಜಿನಿಯರ್ ಗಳನ್ನು ಕರೆಸಿ ಹೊಂಡ ಮುಚ್ಚುವಂತೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದರು.



Continue Reading
Click to comment

Leave a Reply

Your email address will not be published. Required fields are marked *

Advertisement