Connect with us

ಆರೋಗ್ಯ

ಪುತ್ತೂರು ಪಶುಸಂಗೋಪನ ಇಲಾಖೆ ವತಿಯಿಂದ ವಿಶ್ವ ರೇಬಿಸ್ ದಿನಾಚರಣೆ

Published

on

ಪುತ್ತೂರು ಸೆಪ್ಟೆಂಬರ್ 28 : ಪಶು ಸಂಗೋಪನ ಇಲಾಖೆಯ ವತಿಯಿಂದ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ಲಸಿಕಾ ಕಾರ್ಯಕ್ರಮ ಹಾಗೂ ಮಾಹಿತಿ ಶಿಬಿರ. ರೇಬಿಸ್ ರೋಗದ ಬಗ್ಗೆ ಜನಜಾಗ್ರತಿ, ಹಾಗೂ ಅದರ ಪರಿಣಾಮದ ಬಗ್ಗೆ ಪುತ್ತೂರಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ dr. ಧರ್ಮಪಾಲ ಗೌಡ ಇವರು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದರು .


ಹಾಗೂ ಮಾನ್ಯ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಸಲಹೆಯಂತೆ ಗ್ರಾಮ ಮಟ್ಟದಲ್ಲಿ ಸಾಕು ನಾಯಿಗಳಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಶೀಘ್ರದಲ್ಲಿ ಆರಂಭವಾಗಲಿದೆ ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕಾಗಿ ಪುತ್ತೂರಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಧರ್ಮಪಾಲ್ ಗೌಡ ಅವರು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ dr. ಧರ್ಮಪಾಲ್ ಗೌಡ. ಜಾನುವಾರು ಅಧಿಕಾರಿ ಪುಷ್ಪರಾಜ್ ಶೆಟ್ಟಿ, ನಗರಸಭಾ ಸದಸ್ಯರಾದ ದಿನೇಶ್ ಶೇವಿರೇ, ನವೀನ್ ಆಚಾರ್ಯ ಸಿದ್ಯಾಳ,ಸಿಬ್ಬಂದಿಗಳಾದ ಅರುಣಾ, ರವಿ ಕುಮಾರ್ ಪೋಲ್ಯ, ಕೀರ್ತನ್ ಆಚಾರ್ಯ. ಅಕ್ಷಯ್ ಗೌಡ, ಶಶಿಧರ್ ನಾಯ್ಕ್ ಕೃಷ್ನಗರ ಉಪಸ್ಥಿತರಿದ್ದರು

Continue Reading
Click to comment

Leave a Reply

Your email address will not be published. Required fields are marked *

Advertisement