Connect with us

ಸಿನಿಮಾ

ಅಪರೂಪದ ವಿಭಿನ್ನ ಹುಟ್ಟು ಕಲಾವಿದ

Published

on

ತಮ್ಮ ಸಣ್ಣ ವಯಸ್ಸಿನ್ನಲ್ಲೇ ಕಲಿಕೆಯ ಜೊತೆಗೆ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಇವರು ತಮ್ಮಲ್ಲಿದ್ದ ಕಲೆಗೆ ಬಹುಮಾನಗಳನ್ನು ಪಡೆಯುತ್ತಿದ್ದರು. ತಮ್ಮಲ್ಲಿ ರುವ ಕಲೆಯನ್ನು ಇನ್ನಷ್ಟು ಪ್ರಜ್ವಲಿಸಲು ಸಾಧನೆಯ ದಾರಿ ಹಿಡಿದರು.ತಮ್ಮ ಸ್ನೇಹಿತರೊಡಗೂಡಿ ಕಿರುಚಿತ್ರವನ್ನು ಮಾಡಿದರು, ಗೆಲ್ಲುವವರೆಗೆ ಸೋಲುಗಳನ್ನೇ ಸಾಧನೆ ಎಂದು ತಿಳಿದು ಮುನ್ನಡಿ ಎಂದು ಹಿರಿಯರು ಹೇಳುವ ಹಾಗೆ ತಮ್ಮ ಸೋಲನ್ನೇ ಗೆಲುವು ಎಂದುಕೊಂಡು ಒಂದೊಂದು ಸೋಲನ್ನೇ ಗೆಲುವಿನ ಮೆಟ್ಟಿಲು, ಒಂದೊಂದು ಸೋಲಿನಲ್ಲೂ ಅನುಭವವನ್ನು ಪಡೆಯುತ್ತಾ ಉತ್ಸಹ ವನ್ನು ಕಳೆದು ಕೊಳ್ಳದೆ ಮತ್ತೆ ಹೊಸ ತಂಡದೊಂದಿಗೆ ತಮ್ಮ ಪಯಣವನ್ನು ಮುಂದುವರಿಸಿದರು. ತಮ್ಮ ಸಾಧನೆಯ ಪಯಣಕ್ಕೆ ಇನ್ನೊಂದು ದಾರಿ ಎನ್ನುವ ಹಾಗೆ ಹಲವಾರು ಭಾರಿ ಆಡಿಷನ್ ಗಳನ್ನು ನೀಡಿದರೂ ಕೂಡ ತಮ್ಮ ಮೊದಲ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಆದ್ರೆ ತಮ್ಮ ಕೊನೆಯ ಪ್ರಯತ್ನದಲ್ಲಿ ಆಯ್ಕೆಯಾಗಿ, 07-07-2018 ಮೊದಲ ಭಾರಿ ಸಿನಿಮಾದ ಕಡೆ ಪಯಣ ಪ್ರಾರಂಭಿಸಿದರು. ಕಲಿಕೆ ಎನ್ನುವುದು ಮುಗಿಯದ ಪುಟಗಳು, ಬದುಕಿನ ಕೊನೆಯವರೆಗೂ ಕಲಿಸುತ್ತಲೇ ಇರುತ್ತದೆ ಎನ್ನುವ ಮಾತಿನ ಹಾಗೆ ಕನ್ನಡ ಸಿನಿಮಾ ಆರ್ಯನ್ ಎಸ್ ಜಿ ಎಂಬುವವರ ಕ್ಯಾಚರ್ಸ್ ಫಿಲಂ ಆಕ್ಟಿಂಗ್ ಕ್ಲಾಸ್ ಪುತ್ತೂರು ಎಂಬ ನಟನ ತರಬೇತಿಯಲ್ಲಿ ನಟನೆಯ ಕೌಶಲ್ಯವನ್ನು ಪಡೆದುಕೊಂಡು,ತಮ್ಮದೇ ಕಿರುಚಿತ್ರವನ್ನು ಪ್ರಾರಂಭಿಸಿದರು.


ಕೇವಲ ಸಿನಿಮಾ ಮಾತ್ರವಲ್ಲದೇ ತಮ್ಮ ಛಪನ್ನು ರಂಗಭೂಮಿಯಲ್ಲೂ ಮುಂದುವರಿಸಿದರು. ಇವರು ಒಬ್ಬರು ಒಳ್ಳೆಯ ನಟ ಮಾತ್ವಲ್ಲದೇ ಉತ್ತಮ ಹಾಡುಗಾರ, ನಿರ್ದೇಶಕ, ಹಾಗೆಯೇ ಉತ್ತಮ ಬರಹಗಾರ ಕೂಡ ಹೌದು. ಮೌನ ಸರಿದಾಗ, ಹೊಸತಿರುವು, ಧನ್ವಂತರಿ,ರೂಪಸಿ, ಇಲ್ಲದ ಬೊಲ್ಪು ಮಾಜಿನಗ, ಭಿಕಾರಿ, ಧನ್ವಂತರಿ 2 ಇವರ ಕೈ ಚಲಕದಲ್ಲಿ ಮೂಡಿ ಬಂದ ಸಿನಿಮಾಗಳು. ನಿರ್ದೇಶನದ ಜೊತೆಗೆ ಕಿರು ಸಿನಿಮಾಗಳಲ್ಲೂ ನಟನೆ ಮಾಡಿರುತ್ತಾರೆ.ಪದಕ, ಅಲೆ ಕ್ಸಂಡರ್, ಕನ ಕಟ್ಟಪುಣಿ ಔ ಟ್ ಆಫ್ ವರ್ಡರ್ , ಪಚ್ಚತಾಪ, ನಿಷೇಧ, ಜಸ್ಟ್ ಲವ್,ರೂಪಸಿ, ಪ್ರಾಣ, ಜೀವನದಲೊಂದು ಅವಾಂತರ, ಅಕ್ಷ, ಸ್ಪಾಯಿಲ್ ಲೈಫ್, ಮೊಕೆದ ಗೊಬ್ಬು, ನಸಿಬು, ಲಾಲಿ,ಹೀಗೆ ಹತ್ತು ಹಲವು ಕಿರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ ಕಿರುಚಿತ್ರಗಳಲ್ಲಿ ಮಾತ್ರವಲ್ಲದೇ ಅವರು ತುಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು ರಾಜ್ ಸೌಂ ಡ್ ಲೈಟ್, ಪಿರ್ಕಿಲು,ಮುಂಬೈ ಟು ಭಡ್ಕಳ,ಲವ್ ಟು ಲಸ್ಸಿ,ಧರ್ಮ ಚಾವಡಿ, ಅವರು ನಟಿಸಿಸಿದ ತುಳು ಸಿನಿಮಾಗಳು, ಕನ್ನಡ ಸಿನಿಮಾ ನಂಬರ್ ಪ್ಲೇಟ್, ತೆಂನ್ಕಾಯಿ ಮಲೆ ನಲ್ಲಿ ಕೂಡ ಅಭಿನಯ ಮಾಡಿರುತ್ತಾರೆ . ಇವರ ಕಥೆ- ನಿರ್ದೇಶನ ಹಾಗೂ ನಾಯಕನಟನಾಗಿ ಅಸ್ಮಿತಾ ಚಿತ್ರದಲ್ಲೂ ಇದೀಗ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ತುಳು ಧಾರಾವಾಹಿ ಪೊಕ್ಕಡೆ ಏರ್ಲ ಒಕ್ಕಡೆ, ತೆಲಿಕೆದ ಒಂಜಿ ಕೊಲಿಕೆ, ತುಳು ಧಾರವಾಹಿಯಲ್ಲಿ ನಟಿಸಿರುವ ಹೆಗ್ಗಳಿಕೆ ಅವರದ್ದು. ಹಾಗೆಯೇ ಮೈಮ್ ಶೋಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದಾರೆ.

ತಮಗೆ ಸಿಕ್ಕ ಸಮಯದಲ್ಲಿ ಹಾಡು ಹಾಡುವುದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಹಾಗೆಯೇ ಇವರೊಬ್ಬರು ಆರ್ಕೆಸ್ಟ್ರಾ ಸಿಂಗರ್ ಕೂಡ ಹೌದು. ಇವರ ಈ ಪ್ರತಿಭೆಯನ್ನು ಗುರುತಿಸಿ ಆಲ್ಬಮ್ ಸಾಂಗ್ಗಳಲ್ಲಿ ಅವಕಾಶವನ್ನು ನೀಡಿದ್ದಾರೆ. ಪೊರ್ಲ ಪೊಣ್ಣು, ಎನ್ನ ಉಡಲ ಅಂಬಾರಿ,ವಿಸ್ಮಯ, ತಿಂಗೊಲ್ದ ಬೊಲ್ಪು ನನ್ನ ಮನದಲಿ ನೀ.. ಹೀಗೆ ಹಲವು ಆಲ್ಬಮ್ ಸಾಂಗ್ ಗಳಲ್ಲಿ ಮತ್ತು ಅಭಯ ಮೂರ್ತಿ ಮಹಾ ವಿಷ್ಣು, ಕಾರ್ಪಡಿದೈಸಿರಿ, ಭಕ್ತಿಗೀತೆಗಳಲ್ಲಿ ತಮ್ಮ ಮತ್ತೊಂದು ಪ್ರತಿಭೆಯ ಬೆಳಕು ಚೆಲ್ಲಿದ್ದಾರೆ. ಇವರು ನಾಟಕ ಕ್ಷೇತ್ರ ದಲ್ಲಿಯೂ ಕೂಡ ಅಭಿನಯಿಸಿದ್ದು, ಪೊಲೀಸ್ ದಾರ್, ಬಡಾಯಿ ಭಾಸ್ಕರ್ ಆಪಿನ ಪೋಪಿನ,ರಾಡ್ ಟ್ ಒಂಜಿ, ಭಾಗ್ಯ ಬೋಡು,ಯಾನ್ ಪನೂಡ ಎರ್ಂದ್, ಉಂದು ಎಂಬ ನಾಟಕಗಳಲ್ಲಿ ನಟಿಸಿದ್ದಾರೆ.

ಇವರ ಸಾರಥ್ಯದಲ್ಲಿ ಅಭಿನಯ ಕಲಾವಿದೆರ್ ಪುತ್ತೂರು ಎಂಬ ನಾಮಧ್ಯೇಯ ದೊಂದಿಗೆ ಮಣ್ಣ್ ಕಾರ್ನಿಕದ ನಾಟಕ ಜನಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನ ಕಂಡಿತು. ರಾಮಕುಂಜ ಕಲಾವಿದೆರ್, ಪುತ್ತೂರು ಕಲಾವಿದೆರ್ ನಾಟಕ ತಂಡ ಮತ್ತು ಪುತ್ತೂರಿನ ಬೊಳ್ಳಿ ಸಂಸಾರ ತಂಡ ಹೀಗೆ ಅನೇಕ ತಂಡಗಳಲ್ಲಿ ಭಾಗವಹಿಸಿದ್ದಾರೆ. ಕನ್ನಡದ ಪ್ರಸಿದ್ಧ ಚಾನೆಲ್ ಕಲರ್ಸ್ ಕನ್ನಡದಲ್ಲಿ ಪ್ರಸಿದ್ಧಿ ಪಡೆದ ಸಾಗರಿ ಧಾರವಾಹಿಯಲ್ಲಿ ನಟಿಸಿದ್ದಾರೆ.ನಮ್ಮ ಟಿವಿ ಕುಡ್ಲ ದಲ್ಲಿ ಬಲೆ ಬುಲಿಪಾಲೆ ರಿಯಾಲಿಟಿ ಶೊ ನಲ್ಲಯೂ ಭಾಗವಹಿಸಿ ಸೈ ಏನಿಸಿಕೊಂಡಿದರೆ.
ಕೇವಲ ನಟನ ಕ್ಷೇತ್ರವಲ್ಲದೆ ಫೋಟೋ ಮತ್ತು ವಿಡಿಯೋ ಆಡಿಟಿಂಗ್ ಅದರ ಜೊತೆಗೆ ಪೋಸ್ಟರ್ ಡಿಸೈನ್,ಇನ್ನಿತರ ಡಿಸೈನ್ ಗಳನ್ನು ಕೂಡ ಮಾಡುತ್ತಾರೆ.ಪ್ರಸ್ತುತ ಅಕ್ಷಯ ಕಾಲೇಜು ಪುತ್ತೂರು ಇಲ್ಲಿ ಕಚೇರಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿದ್ಯೆ ಹಂಚಿದ್ದಷ್ಟು ಹೆಚ್ಚುವ ನಿಧಿ ಬಚ್ಚಿಟ್ಟಷ್ಟು ಕರಗುವ ಕರ್ಪುರ ಎನ್ನುವ ಮಾತಿನ ಹಾಗೆ ಇವರು ತಮ್ಮಲ್ಲಿರುವ ಕಲೆಯನ್ನು ಬಚ್ಚಿಡದೆ ಹೊಸ ಪ್ರತಿಭಗಳಿಗೆ ಧಾರೆಯೆರೆದರು. ಇವರ ಈ ಸಾಧನೆಯನ್ನು ಗುರುತಿಸಿ ಕಹಳೆ ನ್ಯೂಸ್ ನಲ್ಲಿ ಸಂದರ್ಶನವನ್ನು ಮಾಡಿರುತ್ತಾರೆ

ಸಾಧನೆಯನ್ನು ಗುರುತಿಸಿಕೊಂಡು ಸನ್ಮಾನಗಳು ಬರುವುದು ಸಹಜ ಅದೇ ರೀತಿಯಲ್ಲಿ ಇವರ ಸಾಧನಗೆ ಹತ್ತು ಹಲವು ವೇದಿಕೆಗಳಲ್ಲಿ ಸನ್ಮಾನಗಳು ಲಭಿಸಿವೆ. ಅಭಿಮಾನಿಗಳ ಪ್ರೀತಿ, ವಿಶ್ವಾಸ, ಆಶೀರ್ವಾದವೇ ಪ್ರಶಸ್ತಿ ಎನ್ನುವ ಇವರು ತಮ್ಮ ಸಾಧನೆಯನ್ನು ಬಾನೆತ್ತರಕ್ಕೆ ಪಸರಿಸಿದರು.ಈ ಬಾರಿ ಸಿನೆಮಾ ವಿಭಾಗದಿಂದ ಆಕ್ಸೆಸ್ ಮ್ಯಾಕ್ಸ್ ಲೈಫ್ ಅರ್ಪಿಸುವ “ಕಲಾರತ್ನ” ಅವಾರ್ಡ್ ಅನ್ನು ಇವರು ತಮ್ಮ ಸಾಧನೆಯ ಮೂಲಕ ಮೂಡಿಗೇರಸಿಕೊಂಡಿದ್ದಾರೆ.

ಶಿಖರವೇರುವ ಲಕ್ಷ್ಯವಿಡು ಸ್ವಲ್ಪವಾದರೂ ಮುಂದೆ ಹೋಗುವೆ, ಗುರಿ ಸಾಧಿಸುವ ಲಕ್ಷ್ಯವಿಡು ಸೋಲದೆ ಮುನ್ನುಗ್ಗುವೆ… ಎನ್ನುವ ಮಾತಿನ ಹಾಗೆ ಇವರ ಕಲಾ ಸಾಧನೆಯು ಉತ್ತುಂಗಕ್ಕೆ ಏರಲಿ. ಕಲಾ ಮಾತೆಯ ಆಶೀರ್ವಾದ ಹಾಗೆಯೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಆಶೀರ್ವಾದ ಸದಾ ಇವರ ಮೇಲಿರಲಿ.

ಶ್ರಾವ್ಯ ಪ್ರಭು. ಎ. ಎಸ್
ಪತ್ರಕರ್ತೆ

Continue Reading
Click to comment

Leave a Reply

Your email address will not be published. Required fields are marked *

Advertisement