Published
4 months agoon
By
Akkare News
ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆಇದರ ಆಶ್ರಯ ದಲ್ಲಿ ಚಿಕ್ಕಬಳ್ಳಾಪುರದ ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದರಾಜ್ಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ
17ರ ವಯೋಮಾನದ ಹುಡುಗರವಿಭಾಗದಲ್ಲಿ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿಯಾದ ಭುವನ್ ಕರಂದ್ಲಾಜೆ ಚಾರ್ವಕ ಗ್ರಾಮದ ಶ್ರೀ ಲಕ್ಷ್ಮಣ ಕರಂದ್ಲಾಜೆ ಮತ್ತು ಶ್ರೀಮತಿ ಸುಪ್ರೀತ ಕೆ ದಂಪತಿಯ ಪುತ್ರ ಇವರು ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.


ಇವರಿಗೆ ಕರಾಟೆ ಶಿಕ್ಷಕರಾದ ಶ್ರೀ ನಾರಾಯಣ ಆಚಾರ್ಯ ಮಳಿ ತರಬೇತಿಯನ್ನು ನೀಡಿದ್ದು,ಶಾಲಾ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ
ಶಾಲಾ ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ ಅಭಿನಂದನೆಯನ್ನು ತಿಳಿಸಿರುತ್ತಾರೆ.








