Published
4 months agoon
By
Akkare News
ಮಂಗಳೂರು:ನವೆಂಬರ್ 14: ಕರಾವಳಿಯಲ್ಲಿ ಕಂಬಳ ಸೀಸನ್ ಪ್ರಾರಂಭವಾಗಲಿದೆ. ನವೆಂಬರ್ 15 ರಿಂದ ಮೊದಲ ಕಂಬಳ ಪಣಪಿಲದಲ್ಲಿ ನಡೆಯಲಿದೆ. ಈ ನಡುವೆ ಕಂಬಳದಲ್ಲಿ 24 ಗಂಟೆ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡುವಂತೆ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಂಗಳೂರು ಪೊಲೀಸ್ ಆಯುಕ್ತರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.


ತುಳುನಾಡಿನ ಕಂಬಳ ಆಚರಣೆ ರಾಜ್ಯದೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಕಳೆದ 5 ದಶಕಗಳಿಂದ ಶನಿವಾರ ಪ್ರಾರಂಭವಾಗಿ ರವಿವಾರ ಬೆಳಗ್ಗೆಯವರೆಗೆ ನಿರಂತರ 24 ಗಂಟೆ ಕಂಬಳ ನಡೆಯುತ್ತಿದೆ. ಧ್ವನಿವರ್ಧಕ ವ್ಯವಸ್ಥೆಯೇ ಕಂಬಳ ಆಯೋಜನೆಗೆ ಮುಖ್ಯವಾಗಿ ಬಳಕೆಯಾಗುತ್ತಿದೆ. ಧ್ವನಿವರ್ಧಕ ಕಂಬಳ ನಡೆಸಲು ಅನಿವಾರ್ಯವೂ ಹೌದು. ಆದುದರಿಂದ ಕಂಬಳ ಆಯೋಜನೆಗೆ ವಿಶೇಷ ಪ್ರೋತ್ಸಾಹದ ಆವಶ್ಯಕತೆ ಇದೆ. ಪರಿಸರ ಕಾಳಜಿಯೊಂದಿಗೆ ಧ್ವನಿವರ್ಧಕ 24 ಗಂಟೆ ಬಳಸಿ ಕಂಬಳ ಸ್ಪರ್ಧೆ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಲಾಯಿತು.
ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಡಾ| ದೇವೀಪ್ರಸಾದ್ ಶೆಟ್ಟಿ ಬೆಳಪು, ಕಾರ್ಯದರ್ಶಿ ವಿಜಯ ಕುಮಾರ್ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚಾರು ಕಲ್ಕುಡೆ ಉಪಸ್ಥಿತರಿದ್ದರು.







