Published
4 months agoon
By
Akkare News
ಈಗ ಚಿನ್ನದ ಪ್ರಿಯರಿಗೆ ಗುಡ್ ನ್ಯೂಸ್ ವೊಂದು ಸಿಕ್ಕಿದೆ, ಚಿನ್ನದ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದ ಆಭರಣ ಪ್ರಿಯರಿಗೆ ಇನ್ಮುಂದೆ ಈಗ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಚಿನ್ನದ ನಿಕ್ಷೇಪಗಳು ದೊರೆಕಿರುವುದು ಒಂದು ನೆಮ್ಮದಿಯ ನಿಟ್ಟಿಸಿರು ಬಿಟ್ಟಂತಾಗಿದೆ.
ಹೌದು, ಇದೆಲ್ಲವೂ ಈಗ ಅಂದುಕೊಂಡಂತೆ, ಆದಲ್ಲಿ ವಿದೇಶದಿಂದ ಚಿನ್ನವನ್ನು ಆಮದು ಮಾಡಿಕೊಳ್ಳುವ ಪರಿಪಾಟ ತಪ್ಪಲಿದೆ.ಈಗ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಈ ಕುರಿತಾಗಿ ಬೃಹತ್ ಪ್ರಮಾಣದಲ್ಲಿ ನಿಕ್ಷೇಪಗಳ ಪರಿಶೋಧನೆ ನಡೆಯುತ್ತಿದೆ.ಈ ಸಂಶೋಧನೆ ವೇಳೆ ರಾಜ್ಯದಲ್ಲಿ ಬಂಗಾರದ ನಿಕ್ಷೇಪಗಳಿರುವುದು ಕಂಡು ಬಂದಿವೆ.ಇದರ ಜೊತೆಗೆ ಯುರೇನಿಯಂ, ತಾಮ್ರ ಮತ್ತು ಇತರ ಖನಿಜ ನಿಕ್ಷೇಪಗಳ ಗುರ್ತಿಸಲು ಸಹ ತಂಡ ಮುಂದಾಗಿದೆ.

ಈಗ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ರಾಜ್ಯದಲ್ಲಿ ಸುಮಾರು 19 ಸ್ಥಳಗಳನ್ನು ಗುರುತಿಸಿದ್ದು, ಈ ಪ್ರದೇಶದಲ್ಲಿ ಹೇರಳವಾಗಿ ಚಿನ್ನದ ನಿಕ್ಷೇಪ ಇರುವುದು ತಿಳಿದು ಬಂದಿದೆ.ಈ ಪ್ರದೇಶಗಳ ವ್ಯಾಪ್ತಿ 16,350 ಹೆಕ್ಟೇರ್ ಎನ್ನಲಾಗಿದೆ, ಹಾಗಾಗಿ ಈ ಪ್ರದೇಶಗಳಲ್ಲಿ ಇಲಾಖೆಯಿಂದ ತೀವ್ರ ಪರಿಶೋಧನೆ ನಡೆಯುತ್ತಿದೆ.

ಈ ಎಲ್ಲಾ ಪ್ರದೇಶಗಳು ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿವೆ ಎಂದು ತಿಳಿದು ಬಂದಿದೆ.ಕೇವಲ ಈ ಪ್ರದೇಶಗಳಲ್ಲದೆ ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳಿಗಾಗಿ ಪರಿಶೋಧನೆ ಮುಂದುವರೆದಿದೆ.ಈ ಹೆಚ್ಚುವರಿ ಪ್ರದೇಶಗಲ್ಲಿ ಬಂಗಾರದ ಜೊತೆಗೆ ತಾಮ್ರ, ಹಾಗೂ ಇನ್ನಿತರ ಖನಿಜಗಳ ಕುರಿತಾಗಿಯೂ ಸುಳಿವು ಸಿಕ್ಕಿದೆ.

ಒಟ್ಟಾರೆಯಾಗಿ ರಾಜ್ಯದಲ್ಲಿ 52 ಸಂಭಾವ್ಯ ಸ್ಥಳಗಳ ಪಟ್ಟಿ ಮಾಡಲಾಗಿದ್ದು, ಅದರಲ್ಲಿ ಪ್ರಮುಖವಾಗಿ ದಕ್ಷಿಣ ಕನ್ನಡ, ಬೆಳಗಾವಿ, ಬೆಂಗಳೂರು ಗ್ರಾಮಾಂತರದ ಹೆಸರಘಟ್ಟ, ವಿಜಯನಗರ, ಚಾಮರಾಜನಗರ, ಶಿವಮೊಗ್ಗದ ಹೊಳೆಹೊನ್ನೂರು, ಕಲಬುರಗಿ,ಹಾವೇರಿ, ಕೊಪ್ಪಳ, ಮಂಡ್ಯ, ಚಿತ್ರದುರ್ಗ ಮತ್ತು ಬಳ್ಳಾರಿ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳು ಹೇರಳವಾಗಿದೆ ಎನ್ನಲಾಗಿದೆ.

ಗಣಿ ಭೂ ಇಲಾಖೆಯೂ ಸಮೀಕ್ಷೆ ಮಾಡುವು ಮುನ್ನ ಇದು ಗಣಿಗಾರಿಕೆ ಅಲ್ಲ ಎನ್ನುವುದನ್ನು ಅರಣ್ಯ ಇಲಾಖೆಗೆ ಮನವರಿಕೆ ಮಾಡಿಕೊಳ್ಳಬೇಕು.ಸದ್ಯ ಕೋಲಾರ್ ಚಿನ್ನದ ಗಣಿ ಸ್ಥಗಿತಗೊಂಡಿರುವುದರಿಂದ ಕೇವಲ ಹಟ್ಟಿ ಚಿನ್ನದ ಗಣಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ.ಹಾಗಾಗಿ ಈಗ ಹೆಚ್ಚಿನ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳಿರುವುದು ರಾಜ್ಯಕ್ಕೆ ಸಂತಸದ ಸಂಗತಿ ಎಂದೇ ಹೇಳಬಹುದು.
ನಿಕ್ಷೇಪಗಳ ಸಮೀಕ್ಷೆ ಹೇಗೆ ನಡೆಯುತ್ತೆ ಗೊತ್ತೇ?
– ದೊಡ್ಡ ಭೂಭಾಗದಲ್ಲಿ ಮೊದಲು ಮಾದರಿ ಸಂಗ್ರಹ.
– ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೆ ಸಮೀಕ್ಷೆ ನಡೆಯುತ್ತದೆ.
– ಬಳಿಕ ವಿವರವಾದ ಸಮೀಕ್ಷೆಯಲ್ಲಿ ನಿಕ್ಷೇಪದ ಅಂದಾಜು ಮಾಡಲಾಗುತ್ತೆ.






