Published
4 months agoon
By
Akkare News
ಬೆಂಗಳೂರು, ನವೆಂಬರ್ 17: 2025ನೇ ವರ್ಷ ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿ ಇದೆ. 2026ನೇ ವರ್ಷವನ್ನು ಸ್ವಾಗತಕ್ಕೆ ಸಜ್ಜಾಗಿದೆ. ಹೊಸ ವರ್ಷದಲ್ಲಿ ಕರ್ನಾಟಕದಲ್ಲಿ ಸಿಗುವ ಸರ್ಕಾರಿ ರಜೆಗಳು ಎಷ್ಟು? ಎಂಬುದರ ಮೇಲೆ ಸಾರ್ವಜನಿಕರು ತಮ್ಮ ಪ್ರವಾಸದ ಯೋಜನೆ ರೂಪಿಸುತ್ತಾರೆ. ಇನ್ನೂ 2026ನೇ ವರ್ಷದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2026ರ 20 ಸಾರ್ವತ್ರಿಕ ರಜೆ ಹಾಗೂ 21 ಪರಿಮಿತಾ ರಜಾ ದಿನಗಳ ಅನುಮೋದನೆ ನೀಡಿದೆ.


2026ರ ಸಾರ್ವತ್ರಿಕ ರಜೆ ಪಟ್ಟಿಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ರಾಷ್ಟ್ರೀಯ ಹಬ್ಬಗಳು, ನಾಡ ಹಬ್ಬ ಸೇರಿದಂತೆ ಮುಂದಿನ ವರ್ಷ ಒಟ್ಟು 20 ದಿನಗಳು ಸರ್ಕಾರಿ ರಜೆ ಇರಲಿದೆ. ಸಚಿವ ಸಂಪುಟ ಸಭೆಯಲ್ಲಿ ಸಾರ್ವತ್ರಿಕ ರಜೆ ಪಟ್ಟಿಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಮುಂದಿನ ವರ್ಷ ಎಲ್ಲಾ ಸರ್ಕಾರಿ ಕಚೇರಿಗಳಿಗೆ, ಶಾಲೆಗಳಿಗೆ, ಸಂಸ್ಥೆಗಳಿಗೆ ಈ ರಜೆಗಳು ಅನ್ವಯವಾಗಲಿದೆ. ಅಲ್ಲದೇ ಸರ್ಕಾರಿ ನೌಕರರಿಗೆ 21 ಪರಿಮಿತಾ ರಜಾವನ್ನ ನೀಡಿಲಾಗಿದ್ದು, ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ರಜೆ ಇರಲಿದೆ.


ಸರ್ಕಾರಿ ನೌಕರರಿಗೆ ಇರುವ ಪರಿಮಿತ ರಜಾ ದಿನಗಳ ಪಟ್ಟಿ
* 01.01.2026, ಗುರುವಾರ. ನೂತನ ವರ್ಷಾರಂಭ
*27.01.2026, ಮಂಗಳವಾರ. ಮಧ್ಯ ನವಮಿ
*04.02.2026, ಬುಧವಾರ. ಷಬ್-ಎ-ಬರಾತ್
*02.03.2026, ಸೋಮವಾರ. ಹೋಳಿ ಹಬ್ಬ
* 17.03.2026, ಮಂಗಳವಾರ. ಷಬ್-ಎ-ಖಾದರ್
* 20.03.2026, ಶುಕ್ರವಾರ. ಜುಮತ್-ಉಲ್-ವಿಧಾ
*23.03.2026, ಸೋಮವಾರ.ದೇವರ ದಾಸೀಮಯ್ಯ ಜಯಂತಿ
*27.03.2026,ಶುಕ್ರವಾರ. ಶ್ರೀ ರಾಮನವಮಿ
*04.04.2026. ಶನಿವಾರ. ಹೋಲಿ ಸ್ಯಾಟರ್ ಡೇ
* 21.04.2026, ಮಂಗಳವಾರ. ಶ್ರೀ ಶಂಕರಾಚಾರ್ಯ ಜಯಂತಿ
*22.04.2026 ಬುಧವಾರ. ಶ್ರೀ ರಾಮಾನುಜಾಚಾರ್ಯ ಜಯಂತಿ
* 21.08.2026, ಶುಕ್ರವಾರ. ಶ್ರೀ ವರಮಹಾಲಕ್ಷ್ಮಿ ವ್ರತ
*27.08.2026 ಗುರುವಾರ. ಯಜುರ್ ಉಪಕರ್ಮ
*28.08.2026, ಶುಕ್ರವಾರ. ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ರಕ್ಷಾ ಬಂಧನ
*04.09.2026, ಶುಕ್ರವಾರ. ಶ್ರೀ ಕೃಷ್ಣ ಜನ್ಮಾಷ್ಟಮಿ
*08.09.2026, ಮಂಗಳವಾರ. ಕನ್ಯಾ ಮರಿಯಮ್ಮ ಜಯಂತಿ
*17.09.2026, ಗುರುವಾರ. ವಿಶ್ವಕರ್ಮ ಜಯಂತಿ
*25.09.2026, ಶುಕ್ರವಾರ. ಶ್ರೀ ಅನಂತಪದ್ಮನಾಭ ವ್ರತ
*24.11.2026, ಮಂಗಳವಾರ. ಗುರು ನಾನಕ್ ಜಯಂತಿ
*26.11.2026, ಗುರುವಾರ. ಹುತ್ತರಿ ಹಬ್ಬ
* 24.12.2026, ಗುರುವಾರ. ಕ್ರಿಸ್‌ಮಸ್ ಈವ್






