Published
3 months agoon
By
Akkare News
ಪುತ್ತೂರು: ನಗರದ ಪಡೀಲ್ ನ ಚಿಕನ್ ಸೆಂಟರ್ ನಲ್ಲಿ
ಕೆಲಸ ಮಾಡುತ್ತಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬದ್ರುದ್ದೀನ್ ಡಿ ಕೆ (27) ಎಂಬ ಯುವಕನೇ ಕಾಣೆಯಾದತ. ಈತ ಸುಮಾರು 8 ವರ್ಷಗಳಿಂದ ಅಬ್ದುಲ್ ರಹಿಮಾನ್ ಮಾಲಕತ್ವದ ಝಿಂದಗೀ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.


29ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದು, ಬಳಿಕ ಮಾಲಕರಿಗೆ ತಿಳಿಸಿ ಅಂಗಡಿಯಿಂದ ಹೋಗಿದ್ದ ಎನ್ನಲಾಗಿದೆ.
ಆ ಬಳಿಕ ಬದ್ರುದ್ದೀನ್ ಕೆಲಸದ ಸ್ಥಳಕ್ಕೂ ಹೋಗದೇ, ಮನೆಗೂ ಬಾರದೆ ಕಾಣೆಯಾಗಿರುವುದಾಗಿ ದೂರು ನೀಡಲಾಗಿದೆ. ಪುತ್ತೂರು ನಗರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ









