Published
2 months agoon
By
Akkare News
ಮಂಗಳೂರು : ಜ.10 : ಇಂದು ಮಂಗಳೂರಿನ ಅತ್ತಾವರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿದರು

ಕರಾವಳಿ ಎಂದರೆ ಒಂದು ಸೌಂದರ್ಯ, ಜ್ಞಾನ ಹಾಗೂ ಸಂಪತ್ತಿನ ಪರ್ವತ. ದೈವ, ದೇವಾಲಯ ಹಾಗೂ ಶಕ್ತಿ ದೇವತೆಗಳ ಪ್ರವಾಸಿ ಕೇಂದ್ರ, ವ್ಯಾಪಾರಿಗಳ ನಿಧಿ ಹಾಗೂ ಪ್ರವಾಸಿಗರ ಸ್ವರ್ಗ. 300 ಕಿ.ಮೀ ಕರಾವಳಿ ಪ್ರದೇಶವನ್ನು ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಪ್ರವಾಸೋದ್ಯಮ ನೀತಿಯನ್ನು ರೂಪಿಸುತ್ತಿದೆ.

ಇತಿಹಾಸಕ್ಕೆ ಹೋಗಿ ನೋಡುವುದಾರೆ ಮಂಗಳೂರಿನವರು ಇಡೀ ರಾಷ್ಟ್ರಕ್ಕೆ ಬ್ಯಾಂಕ್‌ಗಳನ್ನು ಕೊಟ್ಟಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಶಿಸ್ತಿನ ಜನ. ಜೊತೆಗೆ ಮಂಗಳೂರು ಒಂದು ಎಜ್ಯುಕೇಷನ್ ಹಬ್. ಇಷ್ಟು ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಪಿಯು ಕಾಲೇಜುಗಳು ಎಲ್ಲೂ ಇಲ್ಲ.

ಪರಿಸರ, ಪ್ರಕೃತಿ ಹಾಗೂ ನೀರಿನ ವಿಷಯದಲ್ಲಿ ಗೋವಾಗೆ ಹಾಗೂ ಮಂಗಳೂರಿಗೆ ಯಾವುದೇ ವ್ಯತ್ಯಾಸವಿಲ್ಲ. ಗೋವಾದಲ್ಲಿರುವ ಬೀಚ್‌ಗಳೇ ನಮ್ಮಲ್ಲೂ ಇವೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ತೊಂದರೆಗಳಿವೆ, ಅವುಗಳನ್ನು ಸರಿಪಡಿಸಿ ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸುತ್ತೇವೆ.
ಕರಾವಳಿ ಭಾಗಕ್ಕೆ ಮತ್ತೆ ಜೀವ ಕೊಡಬೇಕು. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇಲ್ಲಿನ ಶಾಸಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ.
ಜೊತೆಗೂಡುವುದು ಆರಂಭ.. ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಎಲ್ಲರೂ ಒಗ್ಗಟ್ಟಾಗಿ ಕರಾವಳಿ ಅಭಿವೃದ್ಧಿಯನ್ನು ಮಾಡೋಣ. ಎಂದು ಸಭೆಯಲ್ಲಿ ಮಾತನಾಡಿದರು.





