Connect with us

ಇತರ

ಕಲ್ಲಡ್ಕ ಮಾದರಿ ಶಾಲೆ ಇಕೋ ಕ್ಲಬ್ ಮಕ್ಜಳಿಂದ ಪ್ರಗತಿಪರ ಕೃಷಿಕ ರಾಮಣ್ಣ ಗೌಡರ ಮಾರ್ಗದರ್ಶನದಲ್ಲಿ ಮಾಡಿದ ತರಕಾರಿ ಕೃಷಿ ಚಟುವಟಿಕೆಯ ಮೊದಲ ಕೊಯ್ಲು.

Published

on

ಕಲ್ಲಡ್ಕ : ಶಿಕ್ಷಣವು ಕೇವಲ ಪಠ್ಯ ಸಂಬಂಧಿತವಾಗಿರದೆ ಚಟುವಟಿಕೆಗಳ ಮೂಲಕವೂ ನಡೆದಾಗ ಕಲಿಕೆಯು ಹೆಚ್ಚು ಕ್ರಿಯಾಶೀಲತೆಯಿಂದ ನಡೆಯುತ್ತದೆ. ಕೃಷಿ ಪಾಠದ ಮೂಲಕ ವಿದ್ಯಾರ್ಥಿಗಳಿಗೆ ತರಕಾರಿಗಳನ್ನು ಬೆಳೆಸುವ ವಿಧಾನಗಳು, ರೋಗ ಬರದಂತೆ ನಿಯಂತ್ರಣ ಕ್ರಮಗಳು, ವಾತಾವರಣಕ್ಕೆ ಅನುಗುಣವಾಗಿ ಬೆಳೆಸುವ ರೀತಿ ಮುಂತಾದ ಕುರಿತು ಮಾಹಿತಿ ನೀಡಿದರೆ ತಮ್ಮ ಮನೆಯ ಪರಿಸರದಲ್ಲಿ ಇದ್ದ ಜಾಗದಲ್ಲಿ ತರಕಾರಿ ಕೃಷಿ ಮಾಡುವ ಬಗ್ಗೆ ಪ್ರಗತಿಪರ ಕೃಷಿಕ ರಾಮಣ್ಣ ಸಪಲ್ಯ ನಾವುೂರ ಕಾರಿಂಜ ರವರು ಶಾಲಾ ಇಕೋ ಕ್ಲಬ್ ನ ವಿದ್ಯಾರ್ಥಿಗಳಿಗೆ ಕೃಷಿ ಪಾಠವನ್ನು ಪ್ರಾಯೋಗಿಕವಾಗಿ ಮಾರ್ಗದರ್ಶನ ಮಾಡುವ ಮೂಲಕ ತಿಳಿಸಿಕೊಟ್ಟರು.

ಅವರು ಜನವರಿ 9 ನೇ ಶುಕ್ರವಾರ ಬಂಟ್ವಾಳ ತಾಲೂಕಿನ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಇಕೋ ಕ್ಲಬ್ಬಿನ ವತಿಯಿಂದ ಶಾಲಾ ಶಿಕ್ಷಕಿ ತೇಜಾಕ್ಷಿ ನೇತೃತ್ವದಲ್ಲಿ ಮಕ್ಕಳು ನಡೆಸಿದ ತರಕಾರಿ ಕೃಷಿ ಚಟುವಟಿಕೆಗಳ ಪ್ರಥಮ ಕೊಯ್ಲು ಮಾಡಿ ಮಕ್ಕಳಿಗೆ ಕೃಷಿಯ ಪ್ರಾರಂಭಿಕ ಹಂತದಿಂದಲೇ ಮಾರ್ಗದರ್ಶನ ನೀಡುತ್ತಾ ಬಂದು ಮಕ್ಕಳ ಜೊತೆ ಕೃಷಿ ಚಟುವಟಿಕೆಗಳ ಮೂಲಕ ಶಿಕ್ಷಣದ ಜೊತೆಗೆ ತಾವು ಬೆಳೆಸಿದ ತರಕಾರಿಗಳ ಮೊದಲ ಕೊಯ್ಲನ್ನು ಮಾಡಿ ಸಂಭ್ರಮಿಸಿದರು..

ಪ್ರಸ್ತುತ ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕದಿಂದ 8ನೇ ತರಗತಿ ತನಕ 912 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಇದರಲ್ಲಿನ ಇಕೋ ಕ್ಲಬ್ಬಿನ ಮಕ್ಕಳು ಈ ವರ್ಷ ಗೋಣಿ ಚೀಲದಲ್ಲಿ ಸುಮಾರು 75 ಬದನೆ ಗಿಡಗಳನ್ನು ನೆಟ್ಟಿದ್ದು, ಜೊತೆಗೆ ಬಸಲೆ, ತೊಂಡೆಕಾಯಿ, ಬಾಳೆ ಗಿಡ ಮೊದಲಾದವುಗಳನ್ನು ನೆಟ್ಟಿದ್ದು ಕೊಯ್ಲು ಹಂತಕ್ಕೆ ಬಂದಿದ್ದು ಈ ದಿನ ಅದರ ಕೊಯ್ಲನ್ನು ಮಾಡಿ ಶಾಲೆಯ ಬಿಸಿ ಊಟಕ್ಕೆ ಬಳಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಪದವೀಧರ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್, ಶಾಲಾ ಶಿಕ್ಷಕ ವೃಂದ, ಇಕೋ ಕ್ಲಬ್ ಮಕ್ಕಳು, ಶಾಲಾ ಸಿಬ್ಬಂದಿ ವರ್ಗ, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement