Connect with us

ಕ್ರೀಡೆ

ಕಾಣಿಯೂರು : ಜ.31 ರಂದು ರಾಜ್ಯ ಮಟ್ಟದ U-21 ವಯೋಮಿತಿಯ ಪುರುಷರ ಮತ್ತು ಮಹಿಳೆಯರ ಮ್ಯಾಟ್ ಕಬಡ್ಡಿ ಪಂದ್ಯಾಟ

Published

on

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ – 2026

ಕಾಣಿಯೂರು.ಜ.19: ಕಾಣಿಯೂರು ಜಾ‌ತ್ರಾ ಮೈದಾನ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಶ್ರೀ ಜಗದ್ಗುರು ಶ್ರೀಮನ್ವದ್ವಾಚಾರ್ಯ ,ಮೂಲ ಮಹಾ ಸಂಸ್ಥಾನಮ್, ಶ್ರೀ ಕಾಣಿಯೂರು ರಾಮತೀರ್ಥ ಮಠ, ಉಡುಪಿ ಇವರ ಶುಭಾಶೀರ್ವಾದಗಳೊಂದಿಗೆ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ (ರಿ.)ಕಲ್ಪಡ, ಕೊಡಿಯಾಲ ಅಂಚೆ, ಸುಳ್ಯ ತಾಲೂಕು ದ.ಕ. ಇದರ ಆಶ್ರಯದಲ್ಲಿ , ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ (ರಿ.) ಮತ್ತು ಕಡಬ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ (ರಿ.) ಕಡಬ ಇವರ ಸಹಭಾಗಿತ್ವದಲ್ಲಿ ಜ.31 ಶನಿವಾರ ಬೆಳ್ಳಿಗ್ಗೆ 9-00 ಕ್ಕೆ ರಾಜ್ಯ ಮಟ್ಟದ U-21 ವಯೋಮಿತಿಯ ಪುರುಷರ ಮತ್ತು ಮಹಿಳೆಯರ ಮ್ಯಾಟ್ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ.

ವಿಶೇಷ ಸೂಚನೆಗಳು

ಪ್ರವೇಶ ಶುಲ್ಕ -1000/-, ಭಾಗವಹಿಸುವ ಎಲ್ಲಾ ಪುರುಷರ ಮತ್ತು ಮಹಿಳಾ ತಂಡಗಳಿಗೆ ಸ್ಮರಣಿಕೆ ನೀಡಲಾಗುವುದು.

ಭಾಗವಹಿಸುವ ಕಬಡ್ಡಿ ತಂಡದ ಆಟಗಾರರು– ದಿನಾಂಕ : 30.01.2005ರ ನಂತರ ಜನಿಸಿರಬೇಕು, ದಿನಾಂಕ : 31.01.2026ಕ್ಕೆ 21 ವರ್ಷ ಮೀರಿರಬಾರದು.

ಬಹುಮಾನಗಳು : U-21 ಪುರುಷರಿಗೆ ಮತ್ತು ಮಹಿಳೆಯರಿಗೆ
*ಪ್ರಥಮ : 15,000/- ಮತ್ತು ಆಕರ್ಷಕ ಶಾಶ್ವತ ಫಲಕ
*ದ್ವಿತೀಯ : 10,000- ಮತ್ತು ಆಕರ್ಷಕ ಶಾಶ್ವತ ಫಲಕ
*ತೃತೀಯ : 6,000/- ಮತ್ತು ಆಕರ್ಷಕ ಶಾಶ್ವತ ಫಲಕ
*ಚತುರ್ಥ : 5,000/- ಮತ್ತು ಆಕರ್ಷಕ ಶಾಶ್ವತ ಫಲಕ
ಭಾಗವಹಿಸುವ ಎಲ್ಲಾ ತಂಡಗಳು ದಿನಾಂಕ 26.01.2026 ಸಂಜೆ 5.00ರ ಒಳಗೆ ಪ್ರವೇಶ ಶುಲ್ಕ ರೂ.1000/- ಗೂಗಲ್ ಪೇ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು.
2 ವಿಭಾಗದ ಸ್ಪರ್ಧೆಯ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ, ಸವ್ಯಸಾಚಿ ಆಟಗಾರರಿಗೆ ಟ್ರೋಫಿ ಮತ್ತು ನಗದು ನೀಡಲಾಗುವುದು ಎಂದು ತಿಳಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement