Connect with us

ಕ್ರೀಡೆ

ಉಳ್ಳಾಲ: ಯು.ಇ.ಎ ವಾಲಿಬಾಲ್ ಪಂದ್ಯಾಟದಲ್ಲಿ ರೋಯಲ್ ಪುತ್ತೂರು ಚಾಂಪಿಯನ್

Published

on

ಪುತ್ತೂರು: ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಅಧೀನದಲ್ಲಿ  ಕಮ್ಯುನಿಟಿ ಫೆಸ್ಟ್ 2026 ಇದರ ಅಂಗವಾಗಿ ಎರಡು ದಿನಗಳ, ಎಂಟು ತಂಡಗಳ ಲೀಗ್ ಮಾದರಿಯ ‘ಎಕ್ಸ್ಪರ್ಟೈಸ್ ಯುನೈಟೆಡ್ ವಾಲಿಬಾಲ್ ಲೀಗ್’ ಉಳ್ಳಾಲದ ಸಿ ಗ್ರೌಂಡ್ ನಲ್ಲಿ ನಡೆಯಿತು.   ಹುಸೇನ್ ಹಾಜಿ ಕೋಡಿಂಬಾಡಿ ಮಾಲಕತ್ವದ, ಸಹ ಮಾಲಕರಾಗಿ ಸೊಹೈಲ್ ರವರ  ರೋಯಲ್ ಪುತ್ತೂರು ತಂಡ  ಮಂಗಳೂರು ಸ್ಪೋರ್ಟ್ಸ್ ಕ್ಲಬ್ ಅಲ್ ಜುಬೈಲ್ ತಂಡವನ್ನು ಫೈನಲ್ ಪಂದ್ಯಾಟದಲ್ಲಿ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ತಂಡದಲ್ಲಿ ಐಕಾನ್ ಆಟಗಾರರಾಗಿ ಜಮ್ಮು ಕಾಶ್ಮೀರದ ಮುಷರಫ್ ಮತ್ತು ಅಯಾಜ್ ಭಾಗವಹಿಸಿದ್ದು ತಂಡದ ಪ್ರಮುಖ ಆಟಗಾರರಾಗಿ ಸೈದ್ ಅಬೂ ಆಶಿಮ್, ಆಸೀಲ್,  ಉನೈ ಜ್, ಸಾಹಿಲ್, ನೌಫಲ್ ಪುಣಚ, ಶಫೀಕ್, ಮುಸ್ತಾಕ್, ಆಸಿಫ್, ಹನೀನ್ ಭಾಗವಹಿಸಿದ್ದರು. ತಂಡದ ಕೋಚ್ ಆಗಿ ಇರ್ಷಾದ್ ಕೌಡಿಚ್ಚಾರ್,  ಮ್ಯಾನೇಜರ್ ಆಗಿ ಮುಧಸಿರ್ ಕಾರ್ಯ ನಿರ್ವಹಿಸಿದ್ದರು.  ಅಲ್ ರೌಂಡರ್ ಆಗಿ ಜಮ್ಮು ಕಾಶ್ಮೀರದ ಮುಶ್ರಫ್, ಉತ್ತಮ (ಲಿಫ್ಟರ್) ಎತ್ತುಗಾರನಾಗಿ ಜಮ್ಮು ಕಾಶ್ಮೀರದ ಅಯಾಜ್, ಉತ್ತಮ   ಹೊಡೆತಗಾರನಾಗಿ ಮಂಗಳೂರು ಸ್ಪೋರ್ಟ್ಸ್ ಕ್ಲಬ್ನ ಸೈದ್ ಆಲಂ ಉತ್ತರ ಪ್ರದೇಶ್, ಉತ್ತಮ ತಡೆಗಾರನಾಗಿ ಸೈಯದ್, ಉತ್ತಮ ಲಿಬ್ರಾರಾಗಿ ನೌಫಲ್ ಪುಣಚ ವೈಯಕ್ತಿಕ  ಪ್ರಶಸ್ತಿಯನ್ನು ಪಡೆದುಕೊಂಡರು ಎಂದು ವಿಜೇತ ತಂಡದ ಸಲಹೆಗಾರರಾದ ಸಿರಾಜ್ ಮತ್ತು ಸಾಲ್ಮರ ಶರೀಫ್ ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement