Connect with us

ಕ್ರೀಡೆ

2ನೇ ಬಾರಿಗೆ ಚಾಂಪಿಯನ್‌ ಕಿರೀಟ; RCB ಹ್ಯಾಟ್ರಿಕ್‌ ಸಾಧನೆ!

Published

on

ವಡೋದರಾ: ಇಂಡಿಯನ್‌ ಪ್ರೀಮಿಯರ್‌ಲೀಗ್‌ನಲ್ಲಿ 17 ವರ್ಷಗಳ ಕಾಲ ಟ್ರೋಫಿಗಾಗಿ ಸೆಣಸಾಡಿದ್ದ ಆರ್‌ಸಿಬಿ ಪುರುಷರ ತಂಡ ಕಳೆದ ವರ್ಷ ತನ್ನ 18ನೇ ಆವೃತ್ತಿಯಲ್ಲಿ ಟ್ರೋಫಿಗೆ ಮುತ್ತಿಟ್ಟಿತ್ತು. ಅದರ ಹಿಂದಿನ ವರ್ಷವೇ ಆರ್‌ಸಿಬಿ ಮಹಿಳಾ ತಂಡ (RCB Womens) ತನ್ನ 2ನೇ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ಮಾದರಿಯಾಗಿತ್ತು. ಇದೀಗ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿರುವ ಬೆಂಗಳೂರು ಮಹಿಳಾ ತಂಡ ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅನ್ನೋ ಮಾತನ್ನ ಮತ್ತೊಮ್ಮೆ ಸಾಬೀತು ಮಾಡಿದೆ. ಈ ಮೂಲಕ ಆರ್‌ಸಿಬಿ ಫ್ರಾಂಚೈಸಿ ಸತತ ಮೂರು ವರ್ಷ ಟ್ರೋಫಿ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿದೆ.

ಪುರುಷರ ತಂಡವನ್ನ ಪ್ರೋತ್ಸಾಹಿಸುತ್ತಾ ಬರುತ್ತಿದ್ದ ಅಭಿಮಾನಿಗಳೂ ಮಹಿಳಾ ತಂಡದ ಗೆಲುವನ್ನ ಹೆಮ್ಮೆಯಿಂದ ಕೊಂಡಾಡಿದರು. ಕೊನೆಯ ರನ್‌ ಸಿಡಿಸುತ್ತಿದ್ದಂತೆ ಅಭಿಮಾನಿಗಳು ಮಹಿಳಾ ಮಣಿಗಳು ಮೈದಾನದಲ್ಲೇ ಕುಣಿದು ಕುಪ್ಪಳಿಸಿದರು. ಆರ್‌ಸಿಬಿ (RCB) ಪರ ಹರ್ಷೋದ್ಘಾರ ಕೂಗುತ್ತಾ ಗೆಲುವಿನ ಕೇಕೆ ಹಾಕಿದರು. ಆದ್ರೆ ಕಳೆದ ಮೂರು ಆವೃತ್ತಿಗಳಲ್ಲೂ ಫೈನಲ್‌ನಲ್ಲಿ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಸತತ 4ನೇ ಬಾರಿಯೂ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಮ್ಯಾಚ್‌ ಕೈ ಚೆಲ್ಲಿದ ಕ್ಯಾಚ್‌ 
ಕೊನೇ 9 ಎಸೆತಗಳಲ್ಲಿ 13 ರನ್‌ ಬೇಕಿದ್ದಾಗ ಚಿನೆಲ್ಲೆ ಹೆನ್ರಿ ಎಸೆತದಲ್ಲಿ ಸ್ಮೃತಿ ಮಂಧಾನ ಕ್ಲೀನ್‌ ಬೌಲ್ಡ್‌ ಆದರು. ಇದರ ಮರು ಎಸೆತದಲ್ಲಿ ಕ್ರೀಸ್‌ಗೆ ಬಂದ ರಾಧಾ ಯಾದವ್‌ ಮೊದಲ ಎಸೆತದಲ್ಲೇ ಕ್ಯಾಚ್‌ ಕೊಟ್ಟಿದ್ದರು. ಆದ್ರೆ ಮಿನ್ನು ಮಣಿ ಮಾಡಿದ ಯಡವಟ್ಟಿನಿಂದ ಕ್ಯಾಚ್‌ ಕೈಚೆಲ್ಲುವ ಜೊತೆಗೆ 2 ರನ್‌ ಹೆಚ್ಚುವರಿಯಾಗಿ ಬಿಟ್ಟುಕೊಟ್ಟರು. ಇದು ಆರ್‌ಸಿಬಿ ತಂಡಕ್ಕೆ ನೆರವಾಯಿತು. ಮರು ಎಸೆತದಲ್ಲಿ 1 ರನ್‌ ಕದ್ದರು. ಇನ್ನೂ ಕೊನೇ ಓವರ್‌ನಲ್ಲಿ 10 ರನ್‌ ಬೇಕಿದ್ದಾಗ ಶ್ರೀಚಾರಿಣಿ ಬೌಲಿಂಗ್‌ನಲ್ಲಿದ್ದರು. ಮೊದಲ 2 ಎಸೆತದಲ್ಲಿ 2 ರನ್‌ ದಾಖಲಾಯಿತು. 3 ಮತ್ತು 4ನೇ ಎಸೆತಗಳನ್ನು ರಾಧಾ ಯಾದವ್‌ ಸತತವಾಗಿ ಬೌಂಡರಿಗಟ್ಟಿದರು. 2ನೇ ಬೌಂಡರಿ ಚಚ್ಚಿದಾಗ ರಾಧಾ ಯಾದವ್‌ ಹಿಟ್‌ ವಿಕೆಟ್‌ ಮಾಡಿಕೊಂಡಿದ್ದರು. ಆದಾಗ್ಯೂ ಬೌಂಡರಿ ಪರಿಗಣಿಸಿ ಆರ್‌ಸಿಬಿ ವಿಜಯಶಾಲಿಯನ್ನಾಗಿ ಘೋಷಿಸಲಾಯಿತು.

ಇಲ್ಲಿನ ವಡೋದರಾ (Vadodara) ಕೊಟಂಬಿ ಕ್ರಿಕೆಟ್‌ ಸ್ಟೇಡಿಯಂನಲ್ಲಿಂದು ನಡೆದ ಪಂದ್ಯದಲ್ಲಿ ಟಾಸ್‌ ಸೋತ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 203 ರನ್‌ ಬಾರಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 19.4 ಓವರ್‌ಗಳಲ್ಲೇ 45 ವಿಕೆಟ್‌ ನಷ್ಟಕ್ಕೆ 204 ರನ್‌ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ 2ನೇ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್‌ ತಂಡದ ಸಾಧನೆಯನ್ನು ಸರಿಗಟ್ಟಿತು.

ಮಂಧಾನ – ಜಾರ್ಜಿಯಾ ವೋಲ್‌ ಶತಕದ ಜೊತೆಯಾಟ 
9 ರನ್‌ಗಳಿಗೆ ಗ್ರೇಸ್‌ ಹ್ಯಾರಿಸ್‌ ಅವರ ಮೊದಲ ವಿಕೆಟ್‌ ಕಳೆದುಕೊಂಡ ಆರ್‌ಸಿಬಿ ಆತಂಕಕ್ಕೆ ಒಳಗಾಯಿತು. ಆ ಬಳಿಕ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಮಂಧಾನ, ಜಾರ್ಜಿಯಾ ವೋಲ್‌ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಒಂದು ಕಡೆ ಜಾರ್ಜಿಯಾ ನಿಧಾನವಾಗಿ ರನ್‌ ಕಲೆಹಾಕುತ್ತಿದ್ದರೆ, ಮತ್ತೊಂದೆಡೆ ಸ್ಮೃತಿ ಮಂಧಾನ ಸಿಕ್ಸರ್‌, ಬೌಂಡರಿ ಚಚ್ಚುತ್ತಾ ಹೋದರು. 23 ಎಸೆತಗಳಲ್ಲೇ ಸ್ಫೋಟಕ ಫಿಫ್ಟಿ ಬಾರಿಸಿದ ಮಂಧಾನ ಒಟ್ಟು 41 ಎಸೆತಗಳಲ್ಲಿ 87 ರನ್‌ ಬಾರಿಸಿದ್ರು. ಇನ್ನು ಜಾರ್ಜಿಯಾ ವೋಲ್‌ 54 ಎಸೆತಗಳಲ್ಲಿ 79 ರನ್‌ ಚಚ್ಚಿದ್ರು. ಒಟ್ಟಾರೆ 95 ಎಸೆತಗಳಲ್ಲಿ ಈ ಜೋಡಿ 165 ರನ್‌ ಬಾರಿಸುವ ಮೂಲಕ ದಾಖಲೆಯ ಜೊತೆಯಾಟ ನೀಡಿತು. ಇವರಿಬ್ಬೆ ಬ್ಯಾಟಿಂಗ್‌ನಿಂದ ನಿರಾಳವಾಗಿ ಗೆಲುವು ಆರ್‌ಸಿಬಿ ಪಾಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement