Connect with us

ಸ್ಥಳೀಯ

ರಾಜ್ಯದ 3ನೇ ಅತಿ ಎತ್ತರದ, ತಾಲೂಕುಗಳಲ್ಲೇ ಪುತ್ತೂರಿನಲ್ಲಿ ಪ್ರಥಮ ರಾಷ್ಟ್ರಧ್ವಜ ಸ್ಥಂಭಉದ್ಘಾಟನೆ – ತ್ರಿವರ್ಣ ಧ್ವಜಾರೋಹಣ

Published

on

ಪುತ್ತೂರು: ಕರ್ನಾಟಕ ರಾಜ್ಯದ 3ನೇ ಅತೀ ಎತ್ತರದ ಮತ್ತು ತಾಲೂಕು ಕೇಂದ್ರಗಳಲ್ಲೇ ಪುತ್ತೂರಿನಲ್ಲಿ ಪ್ರಥಮವಾಗಿರುವ ರಾಷ್ಟ್ರಧ್ವಜಸ್ಥಂಭದ ಉದ್ಘಾಟನೆ ಮತ್ತು ತ್ರಿವರ್ಣ ಧ್ವಜಾರೋಹಣ ಕಾರ್ಯಕ್ರಮ ಫೆ.17ರಂದು ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ಉದ್ಯಾನವನದಲ್ಲಿ ನಡೆಯಿತು.

ಧ್ವಜಸ್ಥಂಭಕ್ಕೆ ಶಿಲಾನ್ಯಾಸಗೊಂಡ 76 ದಿನಗಳೊಳಗೆ ಉದ್ಘಾಟನೆ ಕಾರ್ಯಕ್ರಮವೂ ನಡೆದಿದೆ.
ಸಂತ ಫಿಲೋಮಿನಾ, ಲಿಟ್ಸ್ ಫ್ಲವರ್, ವಿವೇಕಾನಂದ ಕನ್ನಡ ಮತ್ತು ಆಂಗ್ಲಮಾಧ್ಯಮ ಹಾಗೂ ರಾಮಕೃಷ್ಣ ಪ್ರೌಢಶಾಲೆಯ ಎನ್‌ಸಿಸಿ, ಸೌಟ್ಸ್ ಗೈಡ್ಸ್‌, ಎರ್‌ಪೋರ್ಸ್‌ ತಂಡದಿಂದ ಆಕರ್ಷಕ ಪಥ ಸಂಚಲನ, ಬ್ಯಾಂಡ್ ಸದ್ದಿನೊಂದಿಗೆ ನೆಲ್ಲಿಕಟ್ಟೆ ಧ್ವಜಸ್ಥಂಭದ ಬಳಿಗೆ ಬಂದು ಶಾಸಕರ ನೇತೃತ್ವದಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಈ ಸಂದರ್ಭನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ನಿಹಾಲ್ ಪಿ ಶೆಟ್ಟಿ, ಅನ್ವ‌ರ್ ಖಾಸಿಂ, ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್‌, ನಗರಸಭೆ ಪೌರಾಯುಕ್ತ ವಿದ್ಯಾ ಕಾಳೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement