Connect with us

ಇತರ

ದೇವಸ್ಥಾನದಲ್ಲಿ ರೀಲ್ಸ್‌ ಮಾಡೋರಿಗೆ ಬಿಗ್‌ ರೂಲ್ಸ್‌!

Published

on

ಫೆ.21 ರಾಜ್ಯದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ರೀಲ್ಸ್ ಮತ್ತು ವೀಡಿಯೋ ಶೂಟಿಂಗ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿಯಮಗಳನ್ನು ಜಾರಿಗೆ ತರುವ ನಿರ್ಧಾರ ಮಾಡಿದೆ. ಇನ್ಮುಂದೆ, ದೇವಸ್ಥಾನಗಳಲ್ಲಿ ಚಿತ್ರೀಕರಣ ಮಾಡಬೇಕಾದರೆ ಆಯ್ಕೆ ಮಾಡಿದ ಸ್ಥಳಗಳಲ್ಲಿ ಮಾತ್ರ ಅವಕಾಶ ದೊರೆಯಲಿದೆ ಮತ್ತು ಅದಕ್ಕಾಗಿ ಶುಲ್ಕ ಕಡ್ಡಾಯವಾಗಲಿದೆ.
ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಈ ಬಗ್ಗೆ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಎ ಮತ್ತು ಬಿ ವರ್ಗದ ಮುಜರಾಯಿ ದೇವಾಲಯಗಳಲ್ಲಿ ಈ ನಿಯಮ ಅನ್ವಯವಾಗಲಿದೆ. ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ, ಯೂಟ್ಯೂಬ್ ಚಾನೆಲ್ ಹೀಗೆ ವಿವಿಧ ಪ್ರಕಾರದ ಚಿತ್ರೀಕರಣಕ್ಕೆ ಶೂಟಿಂಗ್ ಶುಲ್ಕ ಪಾವತಿಸುವುದು ಕಡ್ಡಾಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಹಿಂದೆ 2003 ಮತ್ತು 2013 ರಲ್ಲಿ ನಿಗದಿತ ಶುಲ್ಕ ಪಾವತಿಸಿ ಶೂಟಿಂಗ್ ಮಾಡಲು ನಿಯಮ ಜಾರಿಗೆ ಬಂದಿದೆ.


ದೇವಾಲಯಗಳಿಗೆ ಸಂಬಂಧಿಸಿದ ಆಸ್ತಿ ಕುರಿತು ವಿವರಿಸಿದ ಅವರು, ಸದ್ಯಕ್ಕೆ ನಮ್ಮ ಇಲಾಖೆಗೆ 40,000 ಪ್ರಾಪರ್ಟಿ ಸೇರಿವೆ. ಇದರಲ್ಲಿ 36,000 ಎಕರೆ ಜಮೀನು ಬಂದಿದೆ. ನಗರ ಪ್ರದೇಶದಲ್ಲಿ 4,000 ಪ್ರಾಪರ್ಟಿ ಇದೆ, ಅದರಲ್ಲಿ 17,000 ಎಕರೆ ದೇವಾಲಯ ಹೆಸರಿನಲ್ಲಿ ಬಂದಿದೆ. ಶೇಕಡಾ 50 ರಷ್ಟು ಸ್ಥಳ ಈಗಾಗಲೇ ದೇವಸ್ಥಾನಗಳಿಗೆ ಸೇರಿವೆ. 2023ಕ್ಕೂ ಮುಂಚೆ ಕೇವಲ 3,500 ಪ್ರಾಪರ್ಟಿ ಮಾತ್ರ ಇತ್ತು. ಮುಂದಿನ ವರ್ಷಗಳಲ್ಲಿ ಎಲ್ಲಾ ದೇವಸ್ಥಾನಗಳ ಜಾಗಗಳನ್ನು ಕೇವಲ ದೇವಸ್ಥಾನಕ್ಕೆ ಸಲ್ಲಿಸುವ ಯೋಜನೆ ಇದೆ ಎಂದು ಸಚಿವರು ಹೇಳಿದ್ದಾರೆ…

Continue Reading
Click to comment

Leave a Reply

Your email address will not be published. Required fields are marked *

Advertisement