Connect with us

ಇತರ

ಕರ್ನಾಟಕದಲ್ಲಿ ಈ ಬಾರಿ ಬೇಸಿಗೆಯಲ್ಲಿ ಭಾರೀ ಬಿಸಿಲು: ಹವಾಮಾನ ಇಲಾಖೆ ಎಚ್ಚರಿಕೆ ಏನು?

Published

on

ಫೆಬ್ರವರಿ 23: ಕರ್ನಾಟಕದಲ್ಲಿ (Karnataka) ಈಗಾಗಲೇ ಬೇಸಿಗೆ (Summer)  ಶುರುವಾಗಿದ್ದು, ದಿನನಿತ್ಯ ಬಿಸಿಲ ಧಗೆ ಹೆಚ್ಚುತ್ತಲೇ ಇದೆ. ಅದರಲ್ಲೂ ಬೆಂಗಳೂರಿನ (Bengaluru) ಬಿಸಿಲಿಗೆ ಜನರು ತತ್ತರಿಸಿದ್ದಾರೆ. ಮನೆಗಳಲ್ಲಿ , ಕಚೇರಿಗಳಲ್ಲಿ ಏರ್ ಕೂಲರ್‌ಗಳನ್ನ ಹಾಕಿಕೊಂಡು ಕೂರುವ ಪರಿಸ್ಥಿತಿ ಇದೆ ಹೀಗಿರುವಾಗ ಮುಂದಿನ ದಿನದಲ್ಲಿ ಬೆಂಗಳೂರಿನಲ್ಲಿ ಇನ್ನಷ್ಟು ತಾಪಮಾನ ಹೆಚ್ಚಾಗಲಿದೆ.
ಹೌದು…ಮಾರ್ಚ್‌ನಿಂದ ಮೇ ತಿಂಗಳವರೆಗೆ ರಾಜ್ಯದಲ್ಲಿ ಬೇಸಿಗೆ (summer) ಬಿಸಿಲಿನ ಬೇಗೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಸಿಲಿಕಾನ್ ಸಿಟಿ ಜನ್ರೇ ಎಚ್ಚರ ಎಚ್ಚರದಿಂದ ಇರಿ, ಕೂಲ್ ಸಿಟಿ ಅಂತಾನೇ ಕರೆಸಿಕೊಳುವ ರಾಜಧಾನಿ ಬೆಂಗಳೂರು ಸದ್ಯ ಹಾಟ್ ಸಿಟಿಯಾಗಿ ಬದಲಾಗಿದೆ.ಕಳೆದ ಒಂದು ವಾರದಿಂದ ರಾಜಧಾನಿಯಲ್ಲಿ ತಾಪಮಾನ ಏರಿಕೆ ಹಿನ್ನಲೆ ಎಂಥ ಶೆಕೆಯಪ್ಪ ಅಂತ ಸಿಟಿ ಜನ ಶಾಪ್ ಹಾಕೋಕ್ಕೆ ಶುರು ಮಾಡಿದ್ದಾರೆ. ಮಾರ್ಚ್ 2ನೇ ವಾರದ ಬಳಿಕ ಬೆಂಗಳೂರಿನ ತಾಪಮಾನ 38-39* ಡಿಗ್ರಿ ತಲುಪಲಿದೆ. ಈ ಹಿನ್ನೆಲೆ ಹವಮಾನ ಇಲಾಖೆ ಸೂಚನೆ ನೀಡಿದ್ದು, ಸಿಲಿಕಾನ್ ಸಿಟಿ ಜನರ ನೆತ್ತಿ ಸುಡಲಿದೆ. ಇತ್ತ ಹವಮಾನ ಇಲಾಖೆ ಸೂಚನೆ ಬೆನ್ನಲೆ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಉರಿಯುವ ಬಿಸಿಲಿಗೆ ಹೀಟ್ ಸ್ಟ್ರೋಕ್ ಭೀತಿ ಒಂದು ಕಡೆಯಾದರೆ, ಖಾಯಿಲೆ ಹೆಚ್ಚಳ ಆತಂಕ ಶುರವಾಗಿದೆ. ತಾಪಮಾನ ಏರಿಕೆ ಬೆನ್ನಲ್ಲೇ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮುಂದಾಗಿದ್ದು, ಹೀಟ್ ಸ್ಟೋಕ್ ಬಗ್ಗೆ ವೈದ್ಯರ ಎಚ್ಚರಿಕೆ ನೀಡುತ್ತಿದ್ದಾರೆ.

ಬೇಸಿಗೆ ಅಂತ ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಬಿ ಕೇರ್​ಫುಲ್ ಎಂದ ಆರೋಗ್ಯ ಇಲಾಖೆ: ಏಕೆ?

ಸಾರ್ವಜನಿಕರಿಗೆ ಎಚ್ಚರಿಕೆ

ಅಂದುಕೊಂಡದಕ್ಕಿಂದ ಈ ಸಲ ಬಿಸಲು ಶೆಖೆ ಜಾಸ್ತಿನೇ ಇರಲಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಬೆಂಗಳೂರು ಮತ್ತಷ್ಟು ಹಾಟ್ ಆಗಲಿದೆ. ಹೀಗಾಗಿ ಹೈಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಎಚ್ಚರಿಕೆ ನೀಡಿದೆ.

ದೇಹದ ಉಷ್ಣತೆಯು 40 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗುವ ಸಂಭವ ಇದೆ. ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟೋಕ್ ಕೂಡಾ ಸಾಧ್ಯತೆ ಇದ್ದು, ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕೆಲವು ದಿನ ತಾಪಮಾನ ಇಳಿಕೆಯವರೆಗೂ 11 ರಿಂದ 4 ಗಂಟೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದೆ ಇರುವಂತೆ ವೈದ್ಯರ ಸಲಹೆ ನೀಡುತ್ತಿದ್ದಾರೆ. ಜೊತೆಗೆ ಹೆಚ್ಷಾಗಿ ನೀರು, ತಂಪು ಪಾನೀಯಗಳು ಸೇರಿದಂತೆ ಡಿಹೈಡ್ರೇಟ್ ಆಗದಂತದ ಆಹಾರವನ್ನ ಹೆಚ್ಚಾಗಿ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ ಈ ವರ್ಷವೂ ಕೂಡ ಬೆಂಗಳೂರು ಮಂದಿಗೆ ಬೇಸಿಗೆಯ ಧಗೆ ಕಾಡಲಿದ್ದು, ಜನರು ಬಿಸಿಲಿನಿಂದ ಉಂಟಾಗುವ ಆರೋಗ್ಯದ ಸಮಸ್ಯೆಯಿಂದ ದೂರ ಇರಲು ಹೆಚ್ಚು ಗಮನ ಹರಿಸಬೇಕಿದೆ. ಜೊತೆಗೆ ಆರೋಗ್ಯ ಇಲಾಖೆಯಿಂದಲೂ ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆಯಾಗಲಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement