Published
1 week agoon
By
Akkare News
ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುವ ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್‌ಪಿವಿ) ಲಸಿಕಾ ಅಭಿಯಾನಕ್ಕೆ ಫೆ.28ರಂದು ಪ್ರಧಾನಿ ಮೋದಿ ರಾಜಸ್ಥಾನದ ಅಜ್ಮೀರ್‌ನಲ್ಲಿ ಚಾಲನೆ ನೀಡಲಿದ್ದಾರೆ.

ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುವ ಎಚ್‌ಪಿವಿ ಪ್ರಕಾರಗಳಾದ 16 ಮತ್ತು 18, ಹಾಗೂ 6 ಮತ್ತು 11 ರ ವಿರುದ್ಧ ರಕ್ಷಣೆ ನೀಡುವ ‘ಗಾರ್ಡಾಸಿಲ್ 4’ ಲಸಿಕೆಯನ್ನು ರಾಷ್ಟ್ರವ್ಯಾಪಿ ನಡೆಯುವ ಈ ಅಭಿಯಾನದ ಸಮಯದಲ್ಲಿ ಒಂದೇ ಡೋಸ್‌ನಲ್ಲಿ 14 ವರ್ಷದ ಬಾಲಕಿಯರಿಗೆ ನೀಡಲಾಗುವುದು. ಎಚ್‌ಪಿವಿ ಲಸಿಕೆ ಹಾಕಿಸಿಕೊಳ್ಳುವುದು ಐಚ್ಛಿಕವಾಗಿದ್ದು, ಬಾಲಕಿಯರಿಗೆ ಲಸಿಕೆ ಹಾಕುವ ಮೊದಲು ಪೋಷಕರು ಅಥವಾ ಪಾಲಕರಿಂದ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ.









