Connect with us

ಇತರ

ರಾಜ್ಯದ 66 ಆರ್‌ಟಿಓ ಕಚೇರಿಗಳಲ್ಲಿ ಜಿಯೋ ಪೆನ್ಸಿಂಗ್ ಆಧರಿತ ನೊಂದಾವಣಿ ನವೀಕರಣ ಅಪ್ಲಿಕೇಶನ್ ಅನುಷ್ಠಾನ : ಸಾರಿಗೆ ಸಚಿವ ರಾಮಲಿಂಗ ರೆಡ್ಡಿ

Published

on

ಬೆಂಗಳೂರು: ರಾಜ್ಯದ 66 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ(ಆರ್‌ಟಿಒ) ಜಿಯೊ ಫೆನ್ಸಿಂಗ್‌ ಆಧಾರಿತ ಎಂ–ವಾಹನ್‌ ಫಿಟ್‌ನೆಸ್‌ ಮೊಬೈಲ್‌ ಅಪ್ಲಿಕೇಷನ್‌ ಅನುಷ್ಠಾನಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಾಣಿಜ್ಯ ಸಾರಿಗೆ ವಾಹನಗಳ ಸದೃಢ ಪ್ರಮಾಣಪತ್ರ ವಿತರಣೆಯಲ್ಲಿ ನಡೆಯುತ್ತಿದ್ದ ದೋಷಪೂರಿತ ಕ್ರಮಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ವಾಣಿಜ್ಯ ಸಾರಿಗೆ ವಾಹನಗಳು ನೋಂದಣಿಯಾಗಿ ಚಾಲ್ತಿಯಲ್ಲಿವೆ. ಸದೃಢ ಪ್ರಮಾಣಪತ್ರ (ಎಫ್‌ಸಿ) ವಿತರಣೆಯಲ್ಲಿ ಏಕರೂಪ ಮತ್ತು ಪಾರದರ್ಶಕ ವ್ಯವಸ್ಥೆಯಿಲ್ಲ ಎಂಬ ಆರೋಪಗಳು ಆಗಾಗ ಕೇಳಿಬರುತ್ತಿದ್ದವು. ಅದಕ್ಕಾಗಿ ಎನ್‌ಐಸಿ ಅಭಿವೃದ್ಧಿ ಪಡಿಸಿರುವ ಹೊಸ ಅಪ್ಲಿಕೇಶನ್‌ ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.

ಪರಿಶೀಲನೆಯ ವೇಳೆ ಆರು ಛಾಯಾಚಿತ್ರಗಳನ್ನು ತೆಗೆದು ಅಪ್ಲಿಕೇಶನ್‌ನಲ್ಲಿ ಭರ್ತಿ ಮಾಡಬೇಕಾಗುತ್ತದೆ. ಇದರಿಂದ ವಾಹನಗಳನ್ನು ಭೌತಿಕವಾಗಿ ತಪಾಸಣೆ ಮಾಡದೇ ಎಫ್‌ಸಿ ನೀಡುವುದು ತಪ್ಪಲಿದೆ ಎಂದು ವಿವರಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement