Connect with us

ಇತರ

ಯುವಕನ ಪ್ರಾಣವನ್ನೇ ಬಲಿ ಪಡೆದ ಸ್ನೇಹಿತನ ಸಹೋದರಿ ಜೊತೆಗಿನ ಅಕ್ರಮ ಸಂಬಂಧ: ಗೆಳೆಯನಿಂದಲೇ ನಡೀತು ಭೀಕರ ಹತ್ಯೆ

Published

on

ಚಾಮರಾಜನಗರ, : ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ದೊಡ್ಡಕೆರೆ ಏರಿ ಬಳಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್​​ ಸಿಕ್ಕಿದೆ. ಸ್ನೇಹಿತನ ಸಹೋದರಿಯ ಜೊತೆಗಿನ ಅಕ್ರಮ ಸಂಬಂಧವೇ ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ (23) ಕೊಲೆಗೆ ಕಾರಣ ಎಂಬ ಸತ್ಯ ಬಯಲಾಗಿದೆ. ಗೆಳೆಯನ ಜೊತೆ ಬೈಕ್​​ ಏರಿ ಪಾರ್ಟಿಗೆ ಹೋಗಿದ್ದ ನಂಜುಂಡಸ್ವಾಮಿಯ ಶವ ಕತ್ತು ಸೀಳಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಜಯ್​ ಎಂಬಾತನ ಜೊತೆಗೆ ಈತ ತೆರಳಿದ್ದ ಎನ್ನಲಾಗಿದ್ದು, ಆತನೇ ಕೊಲೆ ಆರೋಪಿ ಎಂಬುದೀಗ ಬಹಿರಂಗಗೊಂಡಿದೆ.

ಕೆಲಸ ಮುಗಿಸಿ ಮನೆಗೆ ಬಂದಿದ್ದ ನಂಜುಂಡಸ್ವಾಮಿಯನ್ನು ಬಲವಂತದಿಂದ ಪಾರ್ಟಿ ಮಾಡೋಣ ಬಾ ಎಂದು ಆತನ ಸ್ನೇಹಿತ ಮತ್ತು ಸೋದರ ಸಂಬಂಧಿಯಾಗಿರುವ ಅಜಯ್ ಅಲಿಯಾಸ್ ಪ್ರಮೋದ್ ಕರೆದುಕೊಂಡು ಹೋಗಿದ್ದ. ನಂಜುಂಡಸ್ವಾಮಿ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾನೆ. ಬಾಲ್ಯದಿಂದಲೂ ಅಜಯ್​​ ಮತ್ತು ನಂಜುಂಡಸ್ವಾಮಿ ಗೆಳೆಯರಾಗಿದ್ದು, ಇಬ್ಬರೂ ಹೇಳಿಕೊಳ್ಳುವಂತಹ ಯಾವುದೇ ಕೆಲಸ ಮಾಡದಿದ್ದರೂ ದಿನ ನಿತ್ಯ ಕಂಠಪೂರ್ತಿ ಕುಡಿಯೋದನ್ನ ಮಾತ್ರ ಅಭ್ಯಾಸ ಮಾಡಿಕೊಂಡಿದ್ದರು. ಈ ನಡುವೆ ತನ್ನ ಸಹೋದರಿಯ ಜೊತೆಗೆ ನಂಜುಂಡಸ್ವಾಮಿ ಅಕ್ರಮ ಸಂಬಂಧ ಹೊಂದಿರೋದು ತಿಳಿದ ಅಜಯ್​​ ಸಿಟ್ಟಿನಲ್ಲಿ ಕೊಲೆ ಮಾಡಿರೋದು ಗೊತ್ತಾಗಿದೆ.

ಇನ್ನು ಅಜಯ್​​ ಸಹೋದರಿಗೆ ಅದಾಗಲೇ ಮದುವಾಗಿದ್ದರೂ ನಂಜುಂಡಸ್ವಾಮಿ ಜೊತೆ ಲವ್ವಿ ಡವ್ವಿ ನಡೆದಿತ್ತು. ಆಕೆಯ ಜೊತೆ ಖಾಸಗಿ ಕ್ಷಣದಲ್ಲಿರುವಾಗಲೇ ಆಕೆಯ ಪತಿ ಕೈಯಲ್ಲಿ ಇವರಿಬ್ಬರು ರೆಡ್​​ ಹ್ಯಾಂಡ್​​ ಆಗಿ ಸಿಕ್ಕಿಬಿದ್ದಿದ್ದರು. ಈ ವಿಚಅರ ಅಜಯ್​​ ಕಿವಿಗೂ ಬಿದ್ದಿತ್ತು. ಹೀಗಾಗಿ ತೀವ್ರ ಕೋಪಗೊಂಡಿದ್ದ ಈತ ಮಾರ್ಚ್ 1 ರಂದು ಮನೆಯಲ್ಲಿ ಮಲಗಿದ್ದ ನಂಜುಂಡನನ್ನ ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿ ಬಳಿಕ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿರೋದು ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಆರೋಪಿ ಅಜಯ್ ಅಲಿಯಾಸ್ ಪ್ರಮೋದ್​​ನ ಬಂಧಿಸಿರುವ ಗುಂಡ್ಲುಪೇಟೆ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರವನ್ನ ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಆತನನ್ನು ಒಪ್ಪಿಸಿದ್ದಾರೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement