Published
2 hours agoon
By
Akkare News
ಮಂಗಳೂರು: ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ‘ಈದುಲ್ ಫಿತರ್’ ಅನ್ನು ಶುಕ್ರವಾರ (ಮಾರ್ಚ್ 20) ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಅವರು ಆದೇಶ ಹೊರಡಿಸಿದ್ದಾರೆ.


ಚಂದ್ರ ದರ್ಶನಕ್ಕೆ ಅನುಗುಣವಾಗಿ ಹಬ್ಬದ ದಿನಾಂಕವು ನಿರ್ಧಾರವಾಗುವುದರಿಂದ, ಜಿಲ್ಲೆಯಲ್ಲಿ ನಾಳೆ ಹಬ್ಬದ ಸಂಭ್ರಮ ಮನೆಮಾಡಿದೆ.
ರಜೆ ಘೋಷಣೆಯು ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರುತ್ತದೆ.








