ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ನೈರುತ್ಯ ಪದವೀಧರ ಕ್ಷೇತ್ರ ಚುನಾವಣೆ :ರಾಜಕೀಯ ‘ಭೀಷ್ಮ ‘ ಆಯನೂರ್ ಮಂಜುನಾಥ್ ಪರ ಮತದಾರರ ಒಲವು

Published

on

ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹುಟ್ಟು ಹೋರಾಟಗಾರ ಅನುಭವಿ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು ಕಣಕ್ಕಿಳಿಸಿದ್ದು, ಜೆಡಿಎಸ್-ಬಿಜೆಪಿ ಮೈತ್ರಿಕೂಟಕ್ಕೆ ತಲೆನೋವಾಗಿ ಪರಿಣಮಿಸಿದೆ. ಇಲ್ಲಿ ಆಯನೂರು ಮಂಜುನಾಥ್‌ ಮತ್ತು ಡಾ. ಧನಂಜಯ ಸರ್ಜಿ ನಡುವೆ ನೇರ ಸ್ಪರ್ಧೆ ನಡೆಯಲಿದೆ.

ನೈರುತ್ಯ ಪದವೀಧರ ಕ್ಷೇತ್ರವು 5ಲೋಕಸಭಾ ಕ್ಷೇತ್ರ ಮತ್ತು 30 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ, ನ್ಯಾಮತಿ, ಹೊನ್ನಾಳಿ ತಾಲೂಕು ವ್ಯಾಪ್ತಿಗಳನ್ನು ಒಳಗೊಂಡಿರುವ ಬೃಹತ್‌ ವಿಸ್ತೀರ್ಣದ ಕ್ಷೇತ್ರ. ಈ ಬಾರಿ ಈ ಕ್ಷೇತ್ರದಿಂದ 11 ಮಂದಿ ಸ್ಪರ್ಧಿಗಳು ಕಣದಲ್ಲಿದ್ದು, ಆಯನೂರು ಮಂಜುನಾಥ್ ಪ್ರಬಲ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. 

ಅಂದಹಾಗೆ ರಾಜಕೀಯ ಕ್ಷೇತ್ರದಲ್ಲಿ ಭೀಷ್ಮ, ಹಳೇ ಹುಲಿ ಎಂದೆಲ್ಲಾ ಕೆರೆಸಿಕೊಲ್ಳುವ ಆಯನೂರು ಮಂಜುನಾಥ್ ಅವರನ್ನು ಮಣಿಸುವುದು ಎನ್ ಡಿಎ ಮೈತ್ರಿಕೂಟಕ್ಕೆ ಸವಾಲೂ ಹೌದು. ಹಾಗಾಗಿ ಎನ್ ಡಿಎ ಮೈತ್ರಿಕೂಟ ತನ್ನ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಯವರನ್ನು ಗೆಲ್ಲಿಸಲು ನಾನಾ ಕಸರತ್ತುಗಳನ್ನು ಆರಂಭಿಸಿವೆ.
 
ಆಯನೂರು ಮಂಜುನಾಥ ಅವರು ಲೋಕಸಭಾ ಸದಸ್ಯರಾಗಿ, ಶಾಸಕನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಮತ್ತು ರಾಜ್ಯಸಭಾ ಸದಸ್ಯರಾಗಿ ದೀರ್ಘಕಾಲ ಜನಸೇವೆ ಸಲ್ಲಿಸಿದವರು ಮತ್ತು ಓರ್ವ ಅಪರೂಪ ವ್ಯಕ್ತಿತ್ವದ ರಾಜಕಾರಣಿಯೂ ಹೌದು. ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ  ಆಯನೂರು ಮಂಜುನಾಥ್ ಅವರು ತನ್ನ ಎಳೆಯಪ್ರಾಯದಿಂದಲೇ ಹೋರಾಟಗಳ ಮೂಲಕವೇ ಬದುಕು ಕಟ್ಟಿಕೊಂಡವರು ಮತ್ತು ಹೋರಾಟಗಳ ಮೂಲಕವೇ ತನ್ನವರ ಬದುಕು ಬಗಾರವಾಗಿಸಿದವರೂ ಕೂಡ. ಅವರು ಕಾರ್ಮಿಕ ಸಂಘಟನೆಯ ಮುಖಂಡನಾಗಿ ಬೆಳೆದು ಬಂದವರು. ಈಗಲೂ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ದೊಡ್ಡಮಟ್ಟದಲ್ಲಿ ಹೋರಾಡುತ್ತಿರುವವರಲ್ಲಿ ಪ್ರಮುಖರೂ ಹೌದು.

 

ಲೋಕಸಭಾ ರಾಜ್ಯಸಭಾ ಸದಸ್ಯ ಅವಧಿಯಲ್ಲಿ ಆಯನೂರು ಮಂಜುನಾಥ ಅವರು ಆಹಾರ ನಿಗಮದ ಅಧ್ಯಕ್ಷ, ಪ್ರವಾಸೋದ್ಯಮ, ಸಾರಿಗೆ, ಕೇಂದ್ರದ ಕಾರ್ಮಿಕ ನೌಕರರಿಗೆ ಸಂಬಂಧಪಟ್ಟ ತ್ರಿಪಕ್ಷೀಯ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸಿ, ಆಯಾ ಕ್ಷೇತ್ರಗಳ ಪರಿಣಿತರಿಂದ ಮೆಚ್ಚುಗೆ ಸಂಪಾದಿಸಿದ್ದಾರೆ.
 
ಕಳೆದ ಅವಧಿಯಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೇಲ್ಮನೆಗೆ ಆಯ್ಕೆಯಾಗಿದ್ದ ಆಯನೂರು ಮಂಜುನಾಥ ಅವರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಪಕ್ಷ ಯಾವುದಾದರೇನು ನನ್ನನ್ನು ನಂಬಿದವರಿಗೆ ನ್ಯಾಗ ಒದಗಿಸುವುದು ನನ್ನ ಮೊದಲ ಆದ್ಯತೆ ಎಂದಿರುವ ಮಂಜುನಾಥ್‌ ಅವರನ್ನು ಮತದಾರರು ಕೈ ಬಿಡುವುದಿಲ್ಲ ಎಂಬ ದೃಢವಾದ ವಿಶ್ವಾಸದೊಂದಿಗೆ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement