Published
7 months agoon
By
Akkare Newsಇದೇ ಸೋಮವಾರದಂದು ಪುತ್ತೂರು ತಾಲೂಕು ಪಂಚಾಯತಿನಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯ ಪ್ರಯುಕ್ತ ಪುತ್ತೂರು ಸಂತೆಯನ್ನು ಬಂದ್ ಮಾಡಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದರು ಇದರಿಂದ ಸಂತೆ ವ್ಯಾಪಾರಿಗಳು ಶಾಸಕರ ಬಳಿ ತೆರಳಿ ಸಂತೆಯಲ್ಲಿ ವಾರಕ್ಕೊಂದು ವ್ಯಾಪಾರ ಮಾಡಿ ಅದರಿಂದ ಬರುವ ಚಿಕ್ಕ ಲಾಭದಿಂದ ಕುಟುಂಬ ಪೋಷಣೆ ಮಾಡುತ್ತಿದ್ದೇವೆ ಅದೂ ಅಲ್ಲದೆ ಬಡವರು ಮಧ್ಯಮ ವರ್ಗದವರು ಕಡಿಮೆ ಬೆಲೆಗೆ ಒಂದು ವಾರಕ್ಕಾಗುವಷ್ಟು ತರಕಾರಿ ಫ್ರೂಟ್ಸ್ ತೆಗೆದು ಕೊಂಡು ಹೋಗುತ್ತಿದ್ದಾರೆ
ಇಂದು ಅಧಿಕಾರಿಗಳು ಸಂತೆ ಬಂದ್ ಮಾಡಿಸಲು ಆದೇಶ ಹೊರಡಿಸಿದ್ದಾರೆ ಸಂತೆಯಿಂದಲೇ ನಮ್ಮ ಜೀವನ ಎಂದು ಶಾಸಕರಲ್ಲಿ ಅಲವತ್ತು ಕೊಂಡಾಗ ಹಿಂದು ಮುಂದು ನೋಡದೇ ಕೂಡಲೇ ಅಧಿಕಾರಿಗಳಿಗೆ ಕಾಲ್ ಮುಖಾಂತರ ಮಾತನಾಡಿ ಯಾವುದೇ ಕಾರಣಕ್ಕೂ ಸೋಮವಾರದಂದು ನಡೆಯುತ್ತಿರುವ ಸಂತೆ ಬಂದ್ ಆಗಬಾರದು ಅದು ಬಡವರ. ಸಂತೆ ಅವರ ಅನ್ನಕ್ಕೆ ಕಲ್ಲು ಹಾಕಬೇಡಿ ಈಗಿಂದೀಗಲೇ ಕೊಟ್ಟ ಆದೇಶವನ್ನು ಹಿಂದೆಗೆದು ಕೊಳ್ಳಿ ಎಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ
ಕೂಡಲೇ ಅಧಿಕಾರಿಗಳು ಬಂದ್ ಆದೇಶವನ್ನು ಹಿಂದೆಗೆದು ಕೊಂಡಿದ್ದಾರೆ ಇಂತಹ ನೂರಾರು ಕೆಲಸಗಳಿಂದಲೇ ನಮ್ಮ ಶಾಸಕರ ಹೆಸರು ಇಂದು ಮೂಲೆ ಮೂಲೆಯಲ್ಲೂ ಕೇಳಿ ಬರುತ್ತಿದೆ
ಸಂತೆ ವ್ಯಾಪಾರಿಗಳ ಬೆಂಬಲಕ್ಕೆ ನಿಂತು ನಾನು ಬಡ ವ್ಯಾಪಾರಿಗಳ ಪಾಲಿನ ಶಾಸಕರು ಎಂದು ತೋರಿಸಿ ಕೊಟ್ಟಿದ್ದಾರೆ
ಬಡವರಿಗಾಗಿ ಅದೆಷ್ಟೋ ಸಹಾಯ ಸಹಕಾರ ಕೊಟ್ಟು ಅವರ ಕಣ್ಣೀರು ಒರೆಸಿದಂತಹ ಶಾಸಕರು ಕೆಲ ಬಡವರ ಕಷ್ಟ ಕಾರ್ಪಣ್ಯಗಳನ್ನು ನೋಡಿ ಸ್ವತಹ ಕಣ್ಣೀರು ಹಾಕಿದ ದಿನವೂ ಇದೆ
ನಿಮ್ಮ ಜೊತೆ ನಾನಿದ್ದೇನೆ ಹೆದರ ಬೇಡಿ ಬಡತನವನ್ನು ಜೊತೆಗೂಡಿ ಎದುರಿಸೋಣ ನಾನು ಕೂಡಾ ಒಂದು ಕಾಲದಲ್ಲಿ ಬಡವನಾಗಿ ಬದುಕು ಸಾಗಿಸಿದವನು ಬಡವರ ಹಸಿವು ಕಷ್ಟ ಏನೆಂದು ತಿಳಿಯಬೇಕಾದರೆ ಒಬ್ಬ ಬಡವನಿಗೆ ಮಾತ್ರ ಸಾಧ್ಯ ಎಂದು ಹೇಳಿ ಅವರ ಕಣ್ಣೀರು ಒರೆಸುತ್ತಿದ್ದರು
ಸಾವಿರಾರು ಬಡವರು ಅಸಹಾಯಕರು ವಿಧವೆಯರು ಅಂಗವಿಕಲರು ದಿನಾ ಒಂದಲ್ಲ ಒಂದು ಸಮಸ್ಯೆಯನ್ನು ಹೇಳಿಕೊಂಡು ಶಾಸಕರ ಬಳಿ ಬಂದಾಗ ಅವರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕೊಟ್ಟು ಕಳಿಸುತ್ತಿದ್ದಾರೆ
ವಾರಕ್ಕೊಂದು ಸಂತೆ ವ್ಯಾಪಾರ ಮಾಡಿ ಕುಟುಂಬ ಪೋಷಣೆ ಮಾಡುತ್ತಿರುವ ನೂರಾರು ವ್ಯಾಪಾರಿಗಳು ಇಂದು ಪುತ್ತೂರು ಸಂತೆಯಲ್ಲಿದ್ದಾರೆ
ಅದೊಂದು ದಿನ ಸಂತೆಯನ್ನೇ ಎಪಿಎಂಸಿ ಗೆ ವರ್ಗಾಯಿಸಿ ಆರು ತಿಂಗಳು ಪುತ್ತೂರು ಸಂತೆಯನ್ನು ಬಂದ್ ಮಾಡಿಸಿ ವ್ಯಾಪಾರಿಗಳ ಹೊಟ್ಟೆಗೆ ಹೊಡೆದ ಒಬ್ಬ ರಾಜಕಾರಣಿ ಇಂದು ಕೂಡಾ ನಮ್ಮ ಮದ್ಯೆ ಇದ್ದಾರೆ
ಇಂತಹವರಿಗೆ ಅಶೋಕ್ ರೈಗಳಂತಹ ವಿಶಾಲ ಮನಸ್ಸು ಆ ಭಗವಂತ ಕೊಡಲಿ ಮತ್ತು ಸಂತೆ ವ್ಯಾಪಾರಿಗಳ ಆಪಧ್ಭಾಂಧವರಾಗಿರುವ ನಮ್ಮೂರಿನ ಹೆಮ್ಮೆಯ ಶಾಸಕರಾದ ಅಶೋಕ್ ರೈಗಳಿಗೆ ಸಂತೆ ವ್ಯಾಪಾರಿಗಳ ಪರವಾಗಿ ಹಾರ್ಧಿಕ ಕ್ರತಜ್ಞತೆಗಳು