Published
7 months agoon
By
Akkare Newsಒಂದು ಪ್ರಕರಣಕ್ಕೆ ಸಂಬಂಧಿಸಿ 9 ತಿಂಗಳ ಗರ್ಭಿಣಿ ದಿವ್ಯಾ ಅವರು ಪೊಲೀಸರಿಗೆ ದೂರು ನೀಡಿದ್ದು, ತನ್ನ ಮಾವ ಸಂಜೀವ ಪೂಜಾರಿ ಅವರನ್ನು ಕೇಳಿಕೊಂಡು ಬಂದ ನೆರೆಮನೆಯ ಮೂವರು ಆರೋಪಿಗಳಾದ ಪುರಂದರ, ಬಾಲಕೃಷ್ಣ ಹಾಗೂ ಪುರುಷೋತ್ತಮ ಅವರು ದೂರುದಾರರ ಪತಿ ಉಮೇಶ್ ಕೋಟ್ಯಾನ್‌ಗೆ ಹಲ್ಲೆ ನಡೆಸಿದ್ದು, ಅದನ್ನು ತಪ್ಪಿಸಲು ಹೋದ ಗರ್ಭಿಣಿಯಾದ ತನ್ನ ಹೊಟ್ಟೆಗೂ ಒದ್ದು ಹಲ್ಲೆ ನಡೆಸಿದ್ದಾನೆ. ಜತೆಗೆ ಮಾವನಿಗೆ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ದೂರುದಾರೆ ದಿವ್ಯಾ ಮಂಗಳೂರು ಲೇಡಿಗೋಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮತ್ತೂಂದು ಪ್ರಕರಣಕ್ಕೆ ಸಂಬಂಧಿಸಿ ಪುರುಷೋತ್ತಮ ಅವರು ದೂರು ನೀಡಿದ್ದು, ಅವರು ಕೆಲಸ ಮುಗಿಸಿ ಬರುತ್ತಿರುವ ವೇಳೆ ಆರೋಪಿ ಸಂಜೀವ ಪೂಜಾರಿ ನಿಂದಿಸಿ ಹಲ್ಲೆ ನಡೆಸಿದ್ದು, ಜತೆಗೆ ಆರೋಪಿಯ ಮನೆಯವರಾದ ಉಮೇಶ, ಪದ್ಮನಾಭರು ಕೂಡ ಬಂದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಸಂಜೀವ ಪೂಜಾರಿಯ ಸೊಸೆ ದಿವ್ಯಾಳು ಕೈ ತಾಗಿ ನೆಲಕ್ಕೆ ಬಿದ್ದಿದ್ದಾಳೆ. ಈ ವೇಳೆ ಆರೋಪಿ ಕತ್ತಿ ತಂದು ಕೊಲೆ ಮಾಡುವ ಉದ್ದೇಶದಿಂದ ಬೀಸಿದ್ದಾನೆ. ತಪ್ಪಿಕೊಂಡಾಗ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸರು ಎರಡೂ ಕಡೆಯ ಪ್ರಕರಣ ದಾಖಲಿಸಿಕೊಂಡು ಘಟನೆಯ ಸತ್ಯಾಸತ್ಯತೆಯನ್ನು ತನಿಖೆ ನಡೆಸುತ್ತಿದ್ದಾರೆ.